Advertisement
ಚಿಟ್ಟನಹಳ್ಳಿ ಗ್ರಾಮದಲ್ಲಿನ ಹಳೆಯ ನೀರಿನ ಟ್ಯಾಂಕ್ ಶಿಥಿಲವಾಗಿದ್ದು, ಸರ್ಕಾರ 50ಸಾವಿರ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಪಂಚಾಯತ್ ರಾಜ್ ಇಲಾಖೆಯ ಮೂಲಕ ಹಣ ಮಂಜೂರು ಮಾಡಿ ಗುತ್ತಿಗೆಯನ್ನೂ ಸಹ ನೀಡಲಾಗಿದೆ.
Related Articles
Advertisement
ಬಳಿಕ ಗುತ್ತಿಗೆದಾರರು ಟ್ಯಾಂಕ್ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿ ಪಾಯ ಮುಚ್ಚುವ ಹೊತ್ತಿಗೆ ಗ್ರಾಮದ ಪಾಪಣ್ಣ ಎಂಬ ವ್ಯಕ್ತಿ ಖ್ಯಾತೆ ತೆಗೆದು ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ ಪಡಿಸಿದ್ದು, ಬೇರೆ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸುವಂತೆ ಅಭಿಯಂತರರ ಮೇರೆ ಪ್ರಭಾವ ಬೀರಿದ ಕಾರಣ ಅಭಿಯಂತರರು ಸ್ಥಳ ಬದಲಾವಣೆಗೆ ಮುಂದಾಗಿದ್ದರಿಂದ ಗ್ರಾಮಸ್ಥರು ಕುಪಿತರಾಗಿದ್ದಾರೆ.
ಇಂಜಿನಿಯರ್ ಸಾಮವೆಲ್ ಸ್ಥಳ ಪರಿಶೀಲನೆ ನಡೆಸಿ ವೃದ್ಧ ದಂಪತಿಗಳಿಂದ ಜಮೀನು ದಾನ ಪಡೆದು ಭೂಮಿ ಪೂಜೆ ನಡೆಸಿ ಕಾಮಗಾರಿಯೂ ಆರಂಭವಾದ ಬಳಿಕ ಇಲ್ಲ ಸಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ.
ನಿಗದಿತ ಸ್ಥಳದಲ್ಲೆ ಟ್ಯಾಂಕ್ ನಿರ್ಮಾಣ ಮಾಡಬೇಕು. ಟ್ಯಾಂಕ್ ಬಳಿ ಹೋಗಲು ರಸ್ತೆ ಮತ್ತು ಪೈಪ್‌ಲೈನ್ ಅಳವಡಿಸಲು ಇಲ್ಲಿ ಯಾವುದೇ ತೊಂದರೆ ಇಲ್ಲ. ಕೇವಲ ರಾಜಕೀಯ ಕಾರಣಗಳಿಂದ ಈ ರೀತಿ ವರ್ತಿಸುವುದು ಸರಿಯಲ್ಲ. ಇದರಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಮೀನು ದಾನ ನೀಡಿರುವ ವೃದ್ಧ ದಂಪತಿಗಳ ಮನಸ್ಸು ನೋಯಿಸಬಾರದು ನಿಗದಿತ ಸ್ಥಳದಲ್ಲೆ ಟ್ಯಾಂಕ್ ನಿರ್ಮಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್, ಮುಖಂಡರಾದ ಜಿ.ಬೆಟ್ಟೇಗೌಡ, ವಾಲೆಕಾರ್ ಸೋಮೇಗೌಡ, ಸಿ.ಎಸ್.ಶಿವಣ್ಣ, ಲಕ್ಷ್ಮಿ ನಿಂಗರಾಜು, ಶ್ಯಾದನಹಳ್ಳಿ ಚಲುವರಾಜು, ವೈ.ಪಿ.ಮಂಜುನಾಥ್, ರಘು ಇತರರು ಇದ್ದರು.
ಇದನ್ನೂ ಓದಿ : ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್