Advertisement

ಪತಿಯನ್ನೇ ಕೊಲೆ ಮಾಡಿ ಪತಿ ಪರಾರಿ

03:43 PM Aug 01, 2023 | Team Udayavani |

ಪಾಂಡವಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ ಹುಲ್ಕೆರೆ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಪುಟ್ಟೇಗೌಡರ ಪುತ್ರ ಗಣೇಶ್‌(33) ಎಂಬಾ ತನೆ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. ಸೌಮ್ಯ(24) ಕೊಲೆಯಾಗಿರುವ ಮಹಿಳೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಂಗಹಳ್ಳಿ ಗ್ರಾಮದ ಸೌಮ್ಯ ಅವರನ್ನು 9 ವರ್ಷಗಳ ಹಿಂದೆ ಹುಲ್ಕೆರೆ ಗ್ರಾಮದ ಗಣೇಶ್‌ ಅವರು ವಿವಾಹವಾಗಿದ್ದರು. ಇವರಿಗೆ 7 ವರ್ಷದ ಗಂಡು ಮಗುವಿದ್ದು, ಆರೋಪಿ ಗಣೇಶ್‌ ಟಿಪ್ಪರ್‌ ಚಾಲಕನಾಗಿ ಜೀವನ ನಡೆಸುತ್ತಿದ್ದ. ಮೃತ ಸೌಮ್ಯ ಹಾಗೂ ಪತಿ ಗಣೇಶ್‌ ನಡುವೆ ಕಳೆದ ಹಲವು ವರ್ಷಗಳಿಂದಲೂ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಕೌಟುಂಬಿಕ ಕಲಹ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ಗಣೇಶ್‌, ಪತ್ನಿ ಸೌಮ್ಯ ನಡುವೆ ಗಲಾಟೆಯಾಗಿ 2011ರಲ್ಲಿ ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ರಾಜಿ ಸಂಧಾನದ ಮೂಲಕ ಮೃತ ಸೌಮ್ಯ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಸೋಮವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮತ್ತೆ ಗಣೇಶ ಹಾಗೂ ಸೌಮ್ಯ ನಡುವೆ ಗಲಾಟೆ ನಡೆದಿದೆ. ಗಲಾಟೆ ನಡುವೆ ಪತಿ ಗಣೇಶ, ಪತ್ನಿ ಸೌಮ್ಯಗೆ ಅರಿತವಾದ ಆಯುಧದಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಇದರಿಂದ ರಕ್ತಸ್ರಾವಗೊಂಡು ಸೌಮ್ಯ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಮನೆ ಬಾಗಿಲಾಕಿ ಪರಾರಿ: ಪತ್ನಿ ಮೃತಪಟ್ಟ ಬಳಿಕ ಪತಿ ಗಣೇಶ್‌ ಮೃತದೇಹವನ್ನು ಮನೆಯಲ್ಲಿಯೇ ಬಿಟ್ಟು, ಮನೆಯ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾನೆ. ಮೃತ ಸೌಮ್ಯ ಅವರ ಅತ್ತೆ, ಮಾವ ಜಮೀನಿನಿಂದ ಮನೆಗೆ ಊಟಕ್ಕೆ ಬಂದಂತಹ ಸಂದರ್ಭದಲ್ಲಿ ಮನೆ ಬೀಗ ಹಾಕಿರುವುದನ್ನು ಕಂಡು ಅನುಮಾನಗೊಂಡು ಮನೆಯ ಮೇಲೆಯಿಂದ ಹೆಂಚು ತೆಗೆದು ನೋಡಿದಾಗ ಸೌಮ್ಯ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

Advertisement

ಪೊಲೀಸರಿಂದ ಸ್ಥಳ ಪರಿಶೀಲನೆ: ವಿಷಯ ತಿಳಿದ ಪಾಂಡವಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌, ಅಪರ ಪೊಲೀಸ್‌ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಎಚ್‌.ಎಸ್‌. ಮುರುಳಿ, ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಾದ ವಿವೇಕಾನಂದ, ಪುನೀತ್‌, ಸಬ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರು. ಘಟನೆ ಸಂಬಂಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸೆರೆಗೆ ಕ್ರಮ: ಎಸ್‌ಪಿ ಯತೀಶ್‌: ಹುಲ್ಕರೆ ಗ್ರಾಮದಲ್ಲಿ ಗಂಡು, ಹೆಂಡತಿ ನಡುವೆ ಗಲಾಟೆಯಾಗಿ ಪತಿಯೇ ಪತ್ನಿಯನ್ನು ಅರಿತವಾದ ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತ ಸೌಮ್ಯ ಮತ್ತು ಪತಿ ಗಣೇಶ್‌ ನಡುವೆ ಗಲಾಟೆ ನಡೆದಿದೆ. ಗಲಾಟೆಗೆ ಸಂಬಂಧಿಸಿದಂತೆ 2011ರಲ್ಲಿ ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಗಣೇಶ್‌ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಗಣೇಶ್‌ ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡು ಆರೋಪಿ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ತಿಳಿಸಿದರು.

ಆರೋಪಿ ಸೆರೆಗೆ ಕ್ರಮ: ಎಸ್‌ಪಿ ಯತೀಶ್‌ ಹುಲ್ಕರೆ ಗ್ರಾಮದಲ್ಲಿ ಗಂಡು, ಹೆಂಡತಿ ನಡುವೆ ಗಲಾಟೆಯಾಗಿ ಪತಿಯೇ ಪತ್ನಿಯನ್ನು ಅರಿತವಾದ ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತ ಸೌಮ್ಯ ಮತ್ತು ಪತಿ ಗಣೇಶ್‌ ನಡುವೆ ಗಲಾಟೆ ನಡೆದಿದೆ. ಗಲಾಟೆಗೆ ಸಂಬಂಧಿಸಿದಂತೆ 2011ರಲ್ಲಿ ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಗಣೇಶ್‌ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಗಣೇಶ್‌ ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡು ಆರೋಪಿ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next