Advertisement
ಪಟ್ಟಣದ ಐದುದೀಪವೃತ್ತದಿಂದ ಹೊರಟ ಶೋಭಾಯಾತ್ರೆಗೆ ಬಿಜೆಪಿ ಮುಖಂಡರು ಚಾಲನೆ ನೀಡಿದರು. ಶ್ರೀರಾಮ ಉತ್ಸವಮೂರ್ತಿ ಇರುವಂತಹ ಶೋಭಯಾತ್ರೆಯೂ ವಿವಿಧ ಕಲಾತಂಡಗಳ ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ಪಾಂಡವ ಕ್ರೀಡಾಂಗಣವನ್ನು ತಲುಪಿತು. ಯಾತ್ರೆಯಲ್ಲಿ ಡೊಳ್ಳು ಕುಣಿತ, ನಂದಿಕುಣಿತ ವಿಶೇಷವಾಗಿ ಚಂಡೇಮೇಳ, ವಾದ್ಯ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆ ಯುದ್ದಕ್ಕೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕೇಸರಿ ಶಾಲು ಪ್ರದರ್ಶಿಸಿ ಜೈಶ್ರೀರಾಮ್ ಎಂಬ ಘೋಷಣೆ ಕೂಗಿದರು.
Related Articles
Advertisement
ರಂಗೋಲಿ, ವೇಷಭೂಷಣ ಸ್ಪರ್ಧೆ: ಶೋಭಾಯಾತ್ರೆ ಅಂಗವಾಗಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗಾಗಿ 122 ಬಾಕ್ಸ್ ಗಳನ್ನು ಆಯೋಜನೆ ಮಾಡಲಾಗಿತ್ತು. ಭಾಗವಹಿಸಿದ ಮಹಿಳೆಯರು ನಿಯೋಜನೆಗೊಂಡಿದ್ದ ಬಾಕ್ಸ್ ಒಳಗಡೆಯೇ ರಂಗೋಲಿ ಬಿಡಿಸಬೇಕಿತ್ತು. ರಂಗೋಲಿ ಬಿಡಿಸಲು 1 ಗಂಟೆ ಕಾಲಾವಕಾಶ ನೀಡಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ 122 ಮಹಿಳೆಯರು ಭಾಗವಹಿಸಿ ವಿವಿಧ ಬಗೆಯ ರಂಗೋಲಿಗಳನ್ನು ಬಿಡಿಸಿ ಗಮನ ಸೆಳೆದರು. ಅದೇ ವೇದಿಕೆಯಲ್ಲಿ ಮಕ್ಕಳ ವೇಷಭೂಷಣ ಸ್ಪರ್ಧೆಯೂ ನಡೆಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು, ಶ್ರೀರಾಮ, ಹನುಮ ಸೇರಿ ವಿವಿಧ ಬಗೆಯ ವೇಷಗಳನ್ನು ಧರಿಸಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು