Advertisement

ಪಂಚಾಯತ್‌ ರಾಜ್‌ ತರಬೇತಿ ಕೇಂದ್ರ ಲೋಕಾರ್ಪಣೆ

06:30 PM Sep 24, 2021 | Team Udayavani |

ಕಲಬುರಗಿ: ನಗರದ ಹೊರವಲಯದಲ್ಲಿ ಇರುವ ಕೆಸರಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಜಿಲ್ಲಾ ಪಂಚಾಯತ್‌ ಸಂಪನ್ಮೂಲ ತರಬೇತಿ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಬೆಂಗಳೂರಿನಿಂದ ವರ್ಚುವಲ್‌ ಮೂಲಕ ಲೋಕಾರ್ಪಣೆ ಮಾಡಿದರು.

Advertisement

ಕಲಬುರಗಿಯಲ್ಲಿ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ನಾಗರಾಜ ಸೇರಿದಂತೆ ಸಿಬ್ಬಂದಿ ವರ್ಗವು ಸಾಂಕೇತಿಕವಾಗಿ ಪೂಜೆ ನೆರವೇರಿಸಿ ಕಚೇರಿ ಪ್ರವೇಶಿಸಿದರು. 3.5 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ 7.05 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರಮತ್ತು1.50ಕೋಟಿರೂ.ವೆಚ್ಚದಲ್ಲಿ ಜಿಲ್ಲಾ ಪಂಚಾಯತ್‌ ಸಂಪನ್ಮೂಲತರಬೇತಿ ಕೇಂದ್ರವನ್ನು ಒಂದೇ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿ ಗ್ರಂಥಾಲಯ, ಆಡಳಿತಾತ್ಮಕ ಕೋಣೆ, ಐದು ಸಾಮಾನ್ಯ ಕೋಣೆ, ಅಡುಗೆ ಕೋಣೆ, ಶೌಚಾಲಯಗಳನ್ನು ಹೊಂದಲಾಗಿದೆ.

ಮೊದಲನೇ ಮಹಡಿಯಲ್ಲಿ ಎರಡು ತರಬೇತಿ ಹಾಲ್‌, ಎರಡು ಅತಿಥಿಗೃಹ ಕೋಣೆ, 12 ಸಾಮಾನ್ಯ ಕೋಣೆ ಮತ್ತು ಸಾಮಾನ್ಯ ಶೌಚಾಲಯಗಳು, ಎರಡನೇ ಮಹಡಿಯಲ್ಲಿ 100 ಜನ ಸಾಮರ್ಥ್ಯದ ಎರಡು ಡಾರ್ಮಿಟರಿ, 12 ಸಾಮಾನ್ಯ ಕೋಣೆ, ಕಂಪ್ಯೂಟರ್‌ ಲ್ಯಾಬ್‌, ತರಬೇತಿ ಕೋಣೆ ಇದೆ. ಒಟ್ಟಾರೆ 43,525 ಚದುರ ಅಡಿ ಅಳತೆಯಲ್ಲಿ ಈ ಕಟ್ಟಡ ತಲೆ ಎತ್ತಿದೆ ಎಂದು ನಿರ್ಮಾಣ ಉಸ್ತುವಾರಿ ವಹಿಸಿದ್ದ ಕೆಆರ್‌ ಐಡಿಎಲ್‌ ಪ್ರಭಾರಿ ಅಧೀಕ್ಷಕ ಅಭಿಯಂತರರಾದ ಕಾರ್ಯನಿರ್ವಾಹಕ ಅಭಿಯಂತ ಶೇಖ್‌ ಸಲಿಮುದ್ದೀನ್‌ ತಿಳಿಸಿದರು. ಮೈಸೂರಿಗೆ ಹೊಗೋದು ತಪ್ಪಿತು: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗುವ ಜನಪ್ರತಿನಿಧಿ ಗಳಿಗೆ ಕಾಲ-ಕಾಲಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಸತಿ ಸಹಿತ ತರಬೇತಿ ನೀಡಲು ಈ ತರಬೇತಿ ಕೇಂದ್ರ ನಿರ್ಮಿಸಲಾಗಿದೆ. ಈ ಹಿಂದೆಲ್ಲ ತರಬೇತಿ ಪಡೆಯಲುಈ ಭಾಗದ ಪ್ರತಿನಿಧಿಗಳು ಮೈಸೂರಿಗೆ ಹೋಗಬೇಕಾಗಿತ್ತು. ಈಗ ಕಲಬುರಗಿಯಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ ತೆರೆದಿರುವುದರಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಪಂಚಾಯಿತಿ ಜನಪ್ರತಿನಿಧಿಗಳು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.

ಇದೇ ರೀತಿ ಧಾರವಾಡದಲ್ಲಿಯೂ ಪ್ರಾದೇಶಿಕ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣದ ಹಂತದಲ್ಲಿದೆ ಎಂದು ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ನಾಗರಾಜ ತಿಳಿಸಿದ್ದಾರೆ. ಎಸ್‌ ಐಆರ್‌ಡಿ ಸಂಸ್ಥೆಯ ಡಿಟಿಸಿ ಸುಲೋಚನಾಅಕ್ಕಾ, ಕೆಆರ್‌ಐಡಿಎಲ್‌ ಕಲಬುರಗಿ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜಾಫರ ಅಹ್ಮದ್‌ ಮತ್ತಿತರರು ಇದ್ದರು. ಇತ್ತ, ಬೆಂಗಳೂರಿನಲ್ಲಿ ನಡೆದಈಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ವಹಿಸಿದ್ದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಗಿರಿರಾಜ್‌ಸಿಂಗ್‌, ಸಚಿವರಾದ ಕೆ.ಎಸ್‌. ಈಶ್ವರಪ್ಪ, ಡಾ| ಸಿ.ಎನ್‌.ಅಶ್ವತ್ಥ್ನಾರಾಯಣ, ಎಸ್‌.ಟಿ.ಸೋಮಶೇಖರ್‌, ಎನ್‌.ಮುನಿರತ್ನ, ಬಿ.ಸಿ.ನಾಗೇಶ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕೆಆರ್‌ಐಡಿಎಲ್‌ ಸಂಸ್ಥೆ ಅಧ್ಯಕ್ಷ ಎಂ. ರುದ್ರೇಶ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next