Advertisement

ಬಿಜೆಪಿಗೆ ಪಂಚರಾಜ್ಯ ಚುನಾವಣೆ ಆತಂಕ

06:12 PM Jan 31, 2022 | Team Udayavani |

ಗೋಕಾಕ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹೊಡೆತ ಬೀಳುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.

Advertisement

ನಗರದ ಹಿಲ್‌ ಗಾರ್ಡನ್‌ದಲ್ಲಿ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿರುವ ಬಗ್ಗೆ ತಿಳಿದು ಕಾಯ್ದೆಗಳನ್ನು ರದ್ದುಪಡಿಸಿದರೂ ಮತ್ತೆ ಕುತಂತ್ರದಿಂದ ಕಾಯ್ದೆ ಜಾರಿ ಮಾಡಬಹುದು.

ಹೀಗಾಗಿ ಎಚ್ಚರದಿಂದ ಇರಬೇಕು. ಪ್ರಸ್ತುತ ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮ, ಪತ್ರಿಕೆ ಸೂಕ್ಷ್ಮತೆಯಿಂದ ಗಮನಿಸಬೇಕು. ನಮ್ಮ ಹೋರಾಟಗಳು ಇತರರಿಗೆ ಪ್ರೇರಣೆಯಾಗಬೇಕು ಎಂದರು.

ಮುಸ್ಲಿಂ ಬಾಂಧವರನ್ನು ಕೆರಳಿಸುವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು, ಅದಕ್ಕೆ ಸ್ಪಂದಿಸದೇ ಪರಿಶೀಲಿಸಬೇಕು. ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಸಮಯ ವ್ಯರ್ಥ ಮಾಡದೇ ಆರ್ಥಿಕ ಪ್ರಗತಿ ಸಾಧಿಸಲು ಮುಂದಾಗಬೇಕು. ಹಿಂದುಳಿದವರು, ಅಲ್ಪಸಂಖ್ಯಾಂತರು ಬಿಜೆಪಿ ಕುತಂತ್ರಕ್ಕೆ ಬಲಿಯಾಗಬೇಡಿ ಎಂದರು.

ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಧರ್ಮ ಇದ್ದರೆ ಮಾತ್ರ ದೇಶ ಎನ್ನುವ ವಾತಾವರಣ ಕಾಣುತ್ತಿರುವುದು ಅಪಾಯಕಾರಿ ಬೆಳವಣಿಗೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಆರ್ಥಿಕ ಸಬಲತೆ ಕಾಣಬೇಕೆಂಬ ಉದ್ದೇಶ ಕಾಂಗ್ರೆಸ್‌ ಹೊಂದಿದ್ದು, ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಪಣ ತೊಟ್ಟಿದ್ದಾರೆ ಎಂದರು.

Advertisement

ಈ ವೇಳೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ಕಲ್ಪನಾ ಜೋಶಿ, ನಜೀರ್‌ ಶೇಖ್‌, ತನ್ವೀರ್‌ ಶೇಮಶೆರ್‌, ಅಮೀದ್‌ ನಾಡವಾಲೆ, ಇಮರಾನ್‌ ತಫಕಿರ್‌, ಮುಂಜುರ್‌ ಶಮ್ಮಶೇರ್‌, ಶಬ್ಬೀರ್‌ ಮುಜಾವರ್‌, ಮೋಸಿನ್‌ ಖೋಜಾ, ತೌಫೀಕ್‌ ಮುಲ್ಲಾ, ತಬಸುಮ್‌ ಮುಲ್ಲಾ, ನಶೀಮಾ ಬುಡ್ಡನ್ನವರ್‌, ಎಚ್‌.ಡಿ. ಮುಲ್ಲಾ, ಇಬ್ರಾನ್‌ ಶೇಖ್‌, ತಾಹೀರ್‌ ಫೀರ್ಜಾದೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next