ಬೆಂಗಳೂರು: ಗ್ರಾಮ ಪಂಚಾಯ್ತಿ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿಯು ಗ್ರಾಪಂ ಮಾತ್ರವಲ್ಲದೆ, ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲೂ ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯ ನಿರ್ವಹಿಸುವ “ಪಂಚ ರತ್ನ’ ಸಮಿತಿ ರಚನೆಕಾರ್ಯ ಸದ್ದಿಲ್ಲದೆ ಶುರು ಮಾಡಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಚಿಂತನೆಯಂತೆರಾಜ್ಯದಲ್ಲಿನ54,000ಕ್ಕೂ ಹೆಚ್ಚುಬೂತ್‌ಗಳಲ್ಲಿತಲಾ ಐದು ಮಂದಿಯ “ಪಂಚರತ್ನ ಸಮಿತಿ’ ಪಡೆ ರಚನೆಯಾಗುತ್ತಿದ್ದು, ಈಗಾಗಲೇ 30,000 “ರತ್ನ’ಗಳ ಗುಂಪು ರಚನೆಯಾಗಿದೆ. ಒಟ್ಟು 2.70 ಲಕ್ಷ ಮಂದಿಯ “ಪಂಚರತ್ನ ಸಮಿತಿ’ ಯು ಸಂಘಟನೆ ಜತೆಗೆ ಗ್ರಾಪಂ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಲು ಸಜ್ಜಾಗುತ್ತಿದೆ.ರಾಜ್ಯದಲ್ಲಿ ಕೇಡರ್‌ಆಧಾರಿತವಾಗಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿರುವ ಬಿಜೆಪಿಯು ಗ್ರಾಮ ಪಂಚಾಯಿತಿ ಹಂತದಲ್ಲಿ ಅಧಿಕಾರ ಹಿಡಿಯುವುದು ಇದರ ಉದ್ದೇಶ.
ಪಂಚರತ್ನ ಸಮಿತಿ: ಗ್ರಾ. ಪಂ. ಚುನಾವಣೆಗೆ ಪ್ರತಿ ಬೂತ್‌ಮಟ್ಟದಲ್ಲಿ ಪಂಚರತ್ನ ಸಮಿತಿ ರಚನೆಯಾಗುತ್ತಿದೆ. ಬೂತ್ ಅಧ್ಯಕ್ಷ, ಬೂತ್ ಮಟ್ಟದ ಏಜೆಂಟ್, ಪರಿಶಿಷ್ಟ ಜಾತಿ ಇಲ್ಲವೇ ಪಂಗಡ, ಹಿಂದುಳಿದ ವರ್ಗದ ತಲಾ ಒಬ್ಬರು ಹಾಗೂ ಮಹಿಳಾ ಸದಸ್ಯೆ ಸೇರಿ ಒಟ್ಟು ಐದು ಮಂದಿ ಇರಲಿದ್ದಾರೆ.ಈ ಐದು ಮಂದಿ ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹಾಗಾಗಿ ಸಂಪೂರ್ಣ ಸಂಘಟನೆ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಒಂದು ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲ ಬೂತ್‌ಗಳ ಪಂಚರತ್ನ ಸಮಿತಿಯು ಪಂಚಾಯ್ತಿ ವ್ಯಾಪ್ತಿಯ ಪ್ರಮುಖರನ್ನೆಲ್ಲಾ ಒಂದೆಡೆಸೇರಿಸಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲು ರೂಪುರೇಷೆ ಸಿದ್ಧವಾಗಿದೆ. ಆ ಮೂಲಕ ಸ್ಥಳೀಯರೊಂದಿಗೆ ಬಾಂದವ್ಯ ವೃದ್ಧಿಸಿಕೊಂಡು ಸಂಘಟನೆಗೆಒತ್ತು ನೀಡಲಿದೆ. ರಾಜ್ಯದಲ್ಲಿರುವ 6000 ಗ್ರಾಪಂಗಳಲ್ಲೂ ತಲಾ ಒಂದು ಕುಟುಂಬ ಸಮ್ಮಿಲನ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.
ಬೂತ್‌ಮಟ್ಟದ ಸಮಿತಿ ಜತೆಗೆ ಹೊಸದಾಗಿ ಪಂಚರತ್ನ ಸಮಿತಿ ರಚನೆಯಾಗಲಿದೆ. ಜತೆಗೆ ಪೇಜ್ ಪ್ರಮುಖರನ್ನು ಆಯ್ಕೆ ಮಾಡಲಾಗುತ್ತದೆ. ಇಷ್ಟು ಮಂದಿ ಗ್ರಾಪಂ ಚುನಾವಣೆಗೆಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಸಮಿತಿ ಗ್ರಾಪಂ ಚುನಾವಣೆಗಷ್ಟೇ ಸೀಮಿತವಾಗಿರುವುದಿಲ್ಲ. ಮುಂದೆ ಎದುರಾಗುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ,ವಿಧಾನಸಭೆ, ಲೋಕಸಭಾ ಚುನಾವಣಾ ಕಾರ್ಯದಲ್ಲೂ ತೊಡಗಿಸಿಕೊಳ್ಳುವ ಕಾಯಂ ಸಮಿತಿಯಾಗಿರಲಿದೆ. ಸದಸ್ಯರಾದವರಿಗೆ ನಿಗದಿತ ಕಾಲಾವಧಿ ಇಲ್ಲವೇ 3 ವರ್ಷಕ್ಕೊಮ್ಮೆ ಬದಲಾಗುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ನಳಿನ್ ಕುಮಾರ್ ಕಟೀಲ್ ಅವರು ಹಿಂದೆ ಕೇರಳದಲ್ಲಿ ಜಾರಿಗೊಳಿಸಿದ ಪ್ರಯೋಗವನ್ನು ಇದೀಗ ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದ್ದಾರೆ.
ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಿಸಿದ ಮೇಲೆ ಕೆಲವರು ಕರಾವಳಿ ಕಲ್ಪನೆಯನ್ನು ವಿಸ್ತರಿ ಸಿಬೆಂಕಿ ಹಚ್ಚುತ್ತಾರೆ ಎಂದು ಟೀಕಿಸಿದರು. ನಮ್ಮದು ಬೆಂಕಿ ಹಚ್ಚುವ ಕೆಲಸವಲ್ಲ. ದಕ್ಷಿಣ ಕರ್ನಾಟಕದಲ್ಲಿ ಇರುವ ಸಂಘಟನಾತ್ಮಕ ರಾಜಕಾರಣವನ್ನು ಹಳೆಯ ಮೈಸೂರು ಪ್ರಾಂತ್ಯದಲ್ಲೂ ವಿಸ್ತರಿಸುವ ಕೆಲಸ ಮಾಡುತ್ತೇವೆ.
– ನಳಿನ್‌ಕುಮಾರ್‌ಕಟೀಲ್, ರಾಜ್ಯ ಬಿಜೆಪಿ ಅಧ್ಯಕ
ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿ ಬೂತ್‌ನಲ್ಲಿ ಪಂಚರತ್ನ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.ಕೇಡರ್‌ಆಧಾರಿತ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಆರಂಭಿಸಲಾಗಿದೆ.
– ಮಹೇಶ್ ಟೆಂಗಿನಕಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
– ಎಂ.ಕೀರ್ತಿಪ್ರಸಾದ್