Advertisement

ಪಂಚಮಸಾಲಿ ಧರಣಿ ಹೋರಾಟದಲ್ಲಿ ಮುಖಾಮುಖಿಯಾದ ಗಾಲಿ –ಮುನವಳ್ಳಿ

10:13 PM Mar 15, 2023 | Team Udayavani |

ಗಂಗಾವತಿ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಪಂಚಮಸಾಲಿ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 61 ದಿನಗಳಿಂದ ನಡೆಸುತ್ತಿರುವ ಧರಣಿ ಹೋರಾಟ ಸ್ಥಳದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹಾಗೂ ಶಾಸಕ ಪರಣ್ಣ ಮುನವಳ್ಳಿ ಮುಖಮುಖಿಯಾಗಿ ಪರಸ್ಪರ ಮಾತನಾಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ಎರಡು ಕಡೆಯ ಅಭಿಮಾನಿಗಳು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ತಮ್ಮ ತಮ್ಮ ಸ್ಟೇಟಸ್ ಗಳನ್ನು ಹಾಕುತ್ತಿದ್ದಾರೆ. ಈ ಮಧ್ಯೆ ಬಿಜೆಪಿಗೆ ಗುಡ್ ಬೈ ಹೇಳಿ ಸ್ವಂತ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯನ್ನು ಸ್ಥಾಪಿಸಿ ಗಂಗಾವತಿ ಸೇರಿದಂತೆ ರಾಜ್ಯದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿರುವ ಗಾಲಿ ಜನಾರ್ಧನರಡ್ಡಿ ಗಂಗಾವತಿಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ತಮ್ಮ ಆಪ್ತರೊಂದಿಗೆ ವ್ಯಾಪಕ ಪ್ರಚಾರ ನಡೆಸಿದ್ದಾರೆ ಕೆಲವು ಗ್ರಾಮಗಳಲ್ಲಿ ಬೋರ್ ವೆಲ್ ಕೊರೆಸುವ ಮೂಲಕ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಸ್ಪರ್ಧೆ ಒಡ್ಡಿದ್ದಾರೆ. ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರನ್ನು ಕರೆಸುವ ಮೂಲಕ ಹಾಲಿ ಶಾಸಕ ಮುನವಳ್ಳಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಸರಕಾರದ ವಿವಿಧ ಇಲಾಖೆಗಳ ಫಲಾನುಭವಿಗಳ ಸಮಾವೇಶವನ್ನು ಮಾಡುವ ಮೂಲಕ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರನ್ನು ಆಹ್ವಾನಿಸಿ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದಲ್ಲಿ 120 ಕೋಟಿ ಅನುದಾನದ ಕಾಮಗಾರಿಗಳಿಗೆ ಚಾಲನೆ ಹಾಗೂ ಗಂಗಾವತಿಯ ಕ್ರೀಡಾಂಗಣದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡುವ ಮೂಲಕ ಮುಂದಿನ ಚುನಾವಣೆಯ ಪ್ರಚಾರ ನಡೆಸಿದ್ದಾರೆ.

Advertisement

ಬುಧವಾರ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾಜದ ಜಗದ್ಗುರುಗಳ ಧರಣಿ ಹೋರಾಟದಲ್ಲಿ ಗಾಲಿ ಜನಾರ್ದನ್ ರೆಡ್ಡಿ ಹಾಗೂ ಶಾಸಕ ಪರಣಮನವಳ್ಳಿ ಪಾಲ್ಗೊಂಡು ಪರಸ್ಪರ ಮಾತನಾಡಿಕೊಳ್ಳುತ್ತಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಮುಂಬರುವ ದಿನಗಳಲ್ಲಿ ಗಾಲಿ ಮತ್ತು ಮುನವಳ್ಳಿ ಅವರ ಸ್ಪರ್ಧೆಯಿಂದ ಗಂಗಾವತಿ ಕ್ಷೇತ್ರ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯುವುದು ಖಚಿತವಾಗಿದೆ.

ಪಂಚಮಸಾಲಿ ಸಮಾಜಕ್ಕೆ ಸರಕಾರ ಶೀಘ್ರವೇ 2ಎ ಮೀಸಲಾತಿಯನ್ನು ಕಲ್ಪಿಸಲಿದ್ದು ಜಗದ್ಗುರುಗಳ ಧರಣಿ ಹೋರಾಟದಲ್ಲಿ ತಾವು ಭಾಗವಹಿಸಿದ್ದು ಇದೇ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನರ ರೆಡ್ಡಿ ಸಹ ಇದ್ದರು ಲೋಕಾಭಿರಾಮವಾಗಿ ಪರಸ್ಪರ ಕ್ಷೇಮ ವಿಚಾರಿಸಿದೆವು ರಾಜಕೀಯ ಮಾತನಾಡಿಲ್ಲ.
-ಪರಣ್ಣ ಮುನವಳ್ಳಿ ಶಾಸಕರು.

ಇದನ್ನೂ ಓದಿ: ಕುಣಿಗಲ್: ಲಾರಿ ಢಿಕ್ಕಿ ಹೊಡೆದು ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಸ್ಥಳದಲ್ಲೇ ಸಾವು

Advertisement

Udayavani is now on Telegram. Click here to join our channel and stay updated with the latest news.

Next