Advertisement

Panchamasali; ಡಿ.10ರಂದು 50 ಸಾವಿರಕ್ಕೂ ಹೆಚ್ಚು ಜನರಿಂದ ಸುವರ್ಣ ವಿಧಾನಸೌಧ ಮುತ್ತಿಗೆ

03:02 PM Dec 08, 2024 | Team Udayavani |

ಗದಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ 3ರಿಂದ 4 ಸಾವಿರ ವಕೀಲರ ನೇತೃತ್ವದಲ್ಲಿ ಟ್ರ್ಯಾಕ್ಟರ್ ಮೂಲಕ 50 ಸಾವಿರ ಜನರಿಂದ ಡಿ. 10ರಂದು ಸುವರ್ಣವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಿಂದ ಕನಿಷ್ಠ 10,000, ನರಗುಂದ ಮತಕ್ಷೇತ್ರದಿಂದ 4 ಸಾವಿರ ಜನರು ಮುತ್ತಿಗೆ ಹಾಕಲು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಹೋರಾಟವನ್ನು ಬಂದ್ ಮಾಡಲು ಪೊಲೀಸ್ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಐಜಿ, ಎಸ್ಪಿ ಅವರಿಗೆ ಹೋರಾಟದ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತೆಗೆದುಕೊಂಡು ಬನ್ನಿ ಎಂದು ಮನವಿ ಮಾಡುತ್ತೇನೆ ಎಂದರು

ಎಲ್ಲ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿರುವ ಧೀಮಂತ ನಾಯಕನಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಸಮಾಜದ ಮೇಲೆ‌ ಕೋಪವೇಕೆ ಎಂದು ಪ್ರಶ್ನಿಸಿದರು. ಈ ಹೋರಾಟವನ್ನು ತಡೆಯುವ ಪ್ರಯತ್ನ ಮಾಡಬೇಡಿ. ನಮ್ಮದು ಶಾಂತಿಯುತ ಹೊರಾಟವಾಗಿದ್ದು ನಮ್ಮ ಹೋರಾಟಕ್ಕೆ ಬೆಂಬಲ ನೀಡಿ. ಹಠಮಾರಿತನದ ಧೋರಣೆ ಬಿಟ್ಟು ಪಂಚಮಸಾಲಿ ಸಮಾಜಕ್ಕೆ 2ಎ ಅಥವಾ 2ಡಿ ಮೀಸಲಾತಿ ನೀಡುತ್ತೇವೆ ಎಂದು ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ ಎಂದು ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ಶಾಂತಿ ಮತ್ತು ಸಹನೆಯನ್ನು ಪರೀಕ್ಷೆ ಮಾಡಬೇಡಿ. ಯಾವ ಕಾರಣಕ್ಕೂ ಮುತ್ತಿಗೆ ಹಾಕುವ ಕಾರ್ಯಕ್ರಮ ನಿಲ್ಲುವುದಿಲ್ಲ. ಸರಕಾರಕ್ಕೆ ಮುಖಭಂಗವಾಗುವ ಮುನ್ನವೇ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

Advertisement

ಕೃಷಿಯನ್ನೇ ನಂಬಿ ಬದುಕುತ್ತಿರುವ ಪಂಚಮಸಾಲಿ ಸಮಾಜವು ಮುಂದಿನ ದಿನಮಾನದಲ್ಲಿ ಕೃಷಿಯನ್ನೇ ನಂಬಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸಮಾಜದ ಬಡಮಕ್ಕಳ ಭವಿಷ್ಯಕ್ಕಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರು 2ಎ ಮೀಸಲಾತಿಗಾಗಿ ಹೋರಾಟ‌ ನಡೆಸುತ್ತ ಬಂದಿದ್ದಾರೆ. ಅವರಿಗೆ ಪಂಚಮಸಾಲಿ ಸಮಾಜದ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಸಮಾಜ ಮತ್ತು ಸರಕಾರದ ನಡುವಿನ ಕೊಂಡಿಯಾಗಿ ಕೆಲಸ‌ ಮಾಡಿದ್ದೇನು. ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಲುವಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಲಾಯಿತು. ಪ್ರಕರಣ ಕೋರ್ಟನಲ್ಲೇ ಉಳಿಯಿತು. ಪ್ರಕರಣ ಹಿಂತೆಗೆದುಕೊಳ್ಳುವುದು ಸೇರಿ 2ಎ ಮೀಸಲಾತಿಗಾಗಿ ಅನೇಕ ಮನವಿ ಹಾಗೂ ಹೋರಾಟ ಮಾಡಿದರೂ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಣ್ಣು ತೆರೆಯಲಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ವಿಜಯಕುಮಾರ ಗಡ್ಡಿ, ಸಿದ್ದಣ್ಣ ಪಲ್ಲೇದ್, ಅಯ್ಯಪ್ಪ ಅಂಗಡಿಸೇರಿ ಸಮಾಜದ ವಕೀಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next