Advertisement

ಪಂಚಮಸಾಲಿ 2 ಎ ಮೀಸಲಾತಿ ಹೋರಾಟ; ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್ !

05:53 PM Jun 22, 2022 | Team Udayavani |

ಬೆಂಗಳೂರು : 2 ಎ ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಮುಖಂಡರ ಜೊತೆ ಸಂಧಾನ ಸಭೆ ನಡೆದಿದ್ದು, ಸಮಾಜದ ಮುಖಂಡರು ಸರಕಾರಕ್ಕೆ ಅಗಸ್ಟ್ 22 ರ ಗಡುವು ನೀಡಿದ್ದು, ಮೀಸಲಾತಿ ನೀಡದಿದ್ದಲ್ಲಿ ಮತ್ತೆ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಸಚಿವ ಸಿ.ಸಿ. ಪಾಟೀಲ್ ಮೂಲಕ ಬುಧವಾರ ನಡೆದ ಸಂಧಾನ ಸಭೆ ಒಂದು ಹಂತಕ್ಕೆ ಯಶಸ್ವಿಯಾಗಿದ್ದು, ಸಿಎಂ ನಿವಾಸದ ಎದುರು ನಡೆಸಲು ತೀರ್ಮಾನಿಸಲಾಗಿದ್ದ ಪ್ರತಿಭಟನೆಯಿಂದ ಪಂಚಮಸಾಲಿ ಸಮಾಜದ ಮುಖಂಡರು ಹಿಂದೆ ಸರಿದಿದ್ದಾರೆ.

ಸಭೆಯ ಬಳಿಕ , ಮಾಜಿ ಕೇಂದ್ರ ಸಚಿವ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸರ್ಕಾರ ಎರಡು ತಿಂಗಳ ಸಮಯ ಕೇಳಿದೆ. ಎರಡು ತಿಂಗಳೊಳ ಗೆ ಆಗುವುದಿಲ್ಲ ಎಂದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ. ಸ್ವಾತಂತ್ರ್ಯ ಒಂದೇ ಸಾರಿ ಬಂತಾ? ಸಾಕಷ್ಟು ಬಾರಿ ಹೋರಾಟ ಮಾಡಿದಾಗಲೇ ಬಂದಿದೆ.ಪ್ರತಿಭಟನೆ ,ಹಾರಾಟ, ಹೋರಾಟ, ಮುಖ ಸವರೋದು, ಮಾಡಬೇಕಾಗುತ್ತದೆ ಎಂದರು.

ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿದೆ .ಒಂದೇ ಬಾರಿಗೆ ಕೊಟ್ಟು ಬಿಡುತ್ತಾರಾ.ಕಾಯುತ್ತೇವೆ..ಕೊಡಲಿಲ್ಲ ಎಂದರೆ ಮತ್ತೊಮ್ಮೆ ಹೋರಾಟ ಮಾಡುತ್ತೇವೆ ಎಂದರು.

ಅಗಸ್ಟ್ 22 ಡೆಡ್ ಲೈನ್ !

Advertisement

ಬೊಮ್ಮಾಯಿ‌ ಸಕಾರಾತ್ಮಕವಾಗಿ ಇದ್ದಾರೆ. ಆಗಲಿಲ್ಲ ಅಂದರೆ ನಾನೇ ಸಿಎಂ ಬೊಮ್ಮಾಯಿ‌ ಮನೆ ಮುಂದೆ ನು ಪ್ರತಿಭಟನೆಗೆ ಕುಳಿತು ಕೊಳ್ಳುತ್ತೇನೆ.
ಆಗಸ್ಟ್ 22ಕ್ಕೆ ಪ್ರತಿಭಟನೆ ಮುಂದುಡಿದ್ದೇವೆ. ಬೆಂಗಳೂರಲ್ಲಿ ಆಗಸ್ಟ್ 23ಕ್ಕೆ‌ ಅಭಿನಂದನೆ ಸಮಾರಂಭ ಆಗಿರಬೇಕು. ಇಲ್ಲ ಬೇರೆ ಎನಾದರೂ ಆಗಿರುತ್ತದೆ. ಬೊಮ್ಮಾಯಿ‌ ಹಾಗೂ ಸಿ.ಸಿ ಪಾಟೀಲ್ ಮೇಲೆ ಭರವಸೆ ಇದೆ. ಸರ್ಕಾರದ ಪರವಾಗಿ ಸಿಸಿ ಪಾಟೀಲ್ ಇದಾರೆ, ಸಮುದಾಯದ ಪರವಾಗಿ ನಾನು ಇದ್ದೇನೆ. ನಮ್ಮ ಪರಿವಾರ ಇದೆ. 2ಎ‌ ಮೀಸಲಾತಿ ಸಿಗುವವರೆಗೂ ನಾನು ಸರ್ಕಾರಿ ಹುದ್ದೆ ಏರುವುದಿಲ್ಲ ಎಂದು ಶಪಥ ಮಾಡಿದರು.

ಈಗ ಸಿಎಂ ಭರವಸೆ ಕೊಟ್ಟಿದ್ದಾರೆ

ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸರ್ಕಾರ ಭರವಸೆ ಈಡೇರಿಸಿಲ್ಲ.. ಹೀಗಾಗಿ ಸಿಎಂ ನಿವಾಸಕ್ಕೆ ಹೋರಾಟ ಮಾಡಲು ತೀರ್ಮಾನ ಮಾಡಿದ್ದೆವು. ಈಗಾಗಲೇ ಸಾಕಷ್ಟು ಪೂರ್ವಭಾವಿ ಸಭೆ ಕೂಡ ಮಾಡಿದ್ದೇವೆ. ಈಗಾಗಲೇ ಒಂದು ಸುತ್ತಿನ ಸಭೆ ಕೂಡ ಸೇರಿ ಮಾತುಕತೆ ಆಗಿದೆ.
ಆದರೆ ಈಗ ಸಿಎಂ ಬಸವರಾಜ ಬೊಮ್ಮಾಯಿ‌ ಭರವಸೆ ಕೊಟ್ಟಿದ್ದಾರೆ. ಸಿಎಂ ಅವರಿಂದ ಭರವಸೆ ಬರುವ ತನಕವೂ ಹೊರಾಟ ಕೈ ಬಿಡುವುದಿಲ್ಲ ಎಂದಿದ್ದೇವು. ಇದೀಗ ಎರಡು ತಿಂಗಳ ಒಳಗಾಗಿ ಭೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ಆಗಸ್ಟ್ 22ರಂದು ಮೀಸಲಾತಿ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಮಾಡುವ ಪ್ರತಿಭಟನೆ ಮುಂದೂಡಲಾಗಿದೆ ಎಂದರು.

ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಜಾಗ್ರತಿ ಕಾರ್ಯಕ್ರಮ ಮಾಡುತ್ತೇವೆ. ಆಕಸ್ಮಾತ್ ಭರವಸೆ ಈಡೇರಿಲ್ಲ ಅಂದರೆ ಶಿಗ್ಗಾಂವ್ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ.ಸರ್ಕಾರದ ಮಂತ್ರಿ ಸಿ‌ ಸಿ ಪಾಟೀಲ್ ಹಾಗೂ ಅರವಿಂದ್ ಬೆಲ್ಲದ್ ನಮ್ಮ ಜೊತೆಗೆ ಇರುತ್ತಾರೆ. ಆಯೋಗದ ವರದಿ ಪಡೆದು ಸಿಎಂ ಬಸವರಾಜ ಬೊಮ್ಮಾಯಿ‌ ತೀರ್ಮಾನ ಮಾಡುತ್ತಾರಂತೆ. ಹೋರಾಟ ಶುರುಮಾಡಿದ ಮೇಲೆ ಸರ್ವೇ ಆರಂಭ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next