ಶೃಂಗೇರಿ: ಕಾಶ್ಮೀರದ ತಿತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ದೇವಾಲಯಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದಿಂದ ಕಾಣಿಕೆಯಾಗಿ ನೀಡುತ್ತಿರುವ ಪಂಚಲೋಹದ ಶ್ರೀಶಾರದಾಂಬೆ ವಿಗ್ರಹವನ್ನು ಜ. 24ರಂದು ಕಾಶ್ಮೀರಕ್ಕೆ ಕೊಂಡೊಯ್ಯಲಾಗುತ್ತಿದೆ.
ಪ್ರಾಚೀನ ಕಾಲದಲ್ಲಿ ಶ್ರೀಶಾರದಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ವಾರ್ಷಿಕ ಘಟಿಕೋತ್ಸವದ ದಿನವಾದ ಗುರು ತೃತೀಯ ದಿನದಂದೇ ವಿಗ್ರಹ ತೆಗೆದುಕೊಂಡು ಹೋಗುತ್ತಿರುವುದು ವಿಶೇಷ. ತಿತ್ವಾಲ್‌ನಲ್ಲಿ ಚೈತ್ರ ಶುಕ್ಲ ಪಾಡ್ಯ 2023ರ ಮಾ.22ರಂದು ವಿಧಿ ಬದ್ಧವಾಗಿ ವಿಗ್ರಹ ಪ್ರತಿಷ್ಠಾಪಿಸಲಾಗುತ್ತಿದೆ.
ಕಾಶ್ಮೀರದಲ್ಲಿ ದೇಗುಲದ ನಿರ್ಮಾಣ ಈ ಹಿಂದೆ ಶ್ರೀಶಾರದಾಪೀಠಕ್ಕೆ ನಡೆಯುತ್ತಿದ್ದ ವಾರ್ಷಿಕ ಯಾತ್ರೆಯ ಪುನರುತ್ಥಾನದ ಕಡೆಗೆ ಅರ್ಥಪೂರ್ಣ ಹೆಜ್ಜೆಯಾಗಿದೆ. ದೇವಾಲಯ ಕಾಮಗಾರಿ ಭರ ದಿಂದ ಸಾಗಿದ್ದು, ಶ್ರೀಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ಭೇಟಿ ಮಾಡಿ ಪರಿಶೀಲಿಸಿದ್ದಾರೆ. ದೇವಾಲಯ ಮಾರ್ಚ್ ಮೊದಲ ವಾರದಲ್ಲಿ ಸಿದ್ಧವಾಗಲಿದೆ.
ಜಗದ್ಗುರುಗಳಿಂದ ಚಾಲನೆ: ಶ್ರೀ ಶಾರದಾ ಪೀಠದಲ್ಲಿ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮಿಗಳು ಮಂಗಳವಾರ ಬೆಳಗ್ಗೆ ಶ್ರೀಶಾರದಾಂಬೆ ವಿಗ್ರಹಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5ಕ್ಕೆ ಮೆರ ವ ಣಿಗೆ ಮೂಲ ಕ ರಥಯಾತ್ರೆ ಹೊರ ಡಲಿದ್ದು, ಶ್ರೀ ಶಾರದಾ ಪೀಠದ ರಕ್ಷಣಾ ಸಮಿತಿಯ ಪಂಡಿತರಾದ ರವೀಂದ್ರ ಪಂಡಿತ್, ಮೊಕಾಶಿ, ರವೀಂದ್ರ ಟಿಕ್ಕು ಹಾಗೂ ಪುರೋಹಿತ ಮೋತಿಲಾಲ್ ನೇತೃತ್ವದ ತಂಡ ಪಾಲ್ಗೊಳ್ಳಲಿದೆ. ರಥಯಾತ್ರೆ ಶೃಂಗೇರಿಯಿಂದ ಚಿಕ್ಕಮಗಳೂರು ಮಾರ್ಗವಾಗಿ ಹೋಗುತ್ತಿದ್ದು, ಜ. 25ರಂದು ಚಿಕ್ಕಮಗಳೂರಿನಿಂದ ಹಾಸನ ಮಾರ್ಗವಾಗಿ ಸಾಗಲಿದೆ. ಜ. 26ರಂದು ಬೆಂಗಳೂರಿನ ಕಾಶ್ಮೀರ ಭವನಕ್ಕೆ ತಲು ಪಿ, 27ರಂದು ಮುಂಬೈಗೆ ತೆರ ಳಲಿದೆ. ಮಾ. 20ರಂದು ಕಾಶ್ಮೀರದ ತಿತ್ವಾಲ್‌ಗೆ ತಲುಪಲಿದೆ.
ದೇಶ ವಿಭಜನೆಯ ನಂತರ ನಡೆದ ಗಲಭೆಗಳ ಸಮಯದಲ್ಲಿ ದುಷ್ಕರ್ಮಿಗಳ ದಾಳಿಗೆ ಸಿಲುಕಿ ಹಾಳಾಗಿದ್ದ ದೇವಸ್ಥಾನದ ಜಾಗವನ್ನು ಸ್ಥಳೀಯರು ಕಾಪಾಡಿಕೊಂಡು ಬಂದಿದ್ದು, ಅವರೆಲ್ಲರೂ ಒಗ್ಗೂಡಿ ರವೀಂದ್ರ ಪಂಡಿತ್ ನೇತೃತ್ವದಲ್ಲಿ ಶಾರದಾ ಪೀಠ ರಕ್ಷಣಾ ಸಮಿತಿ ರಚಿಸಿಕೊಂಡಿದ್ದಾರೆ. ಈ ಸಮಿತಿಗೆ 2021ರ ಸೆ. 14ರಂದು ಜಾಗ ಹಸ್ತಾಂತರಿಸಲಾಗಿದೆ.
ಸಮಿತಿ ದೇವಾಲಯವಿದ್ದ ಜಾಗದಲ್ಲಿ ಉತ್ಖನನ ನಡೆಸಿದಾಗ ಹಿಂದಿನ ಸಂರಚನೆಯ ಅವಶೇಷಗಳು, ಒಡೆದು ಹೋಗಿರುವ ಶಿಲಾ ರಚನೆಗಳು, ಮರದ ತುಂಡುಗಳು ದೊರಕಿದ್ದವು. ಈಗ ತಿತ್ವಾಲ್‌ನಲ್ಲಿ ನೂತನವಾಗಿ ದೇವಾಲಯ ನಿರ್ಮಾಣವಾಗು ತ್ತಿದ್ದು, ಕರ್ನಾಟಕದ ಬಿಡದಿಯ ಗ್ರಾನೈಟ್ ಶಿಲೆಯಿಂದ ಶ್ರೀಶಾರದಾಂಬೆ ವಿಗ್ರಹ ತಯಾರಾಗಿದೆ. ಶ್ರೀಶಾರದಾ ಪೀಠದ ಪರಂಪರೆಗೆ ಅನುಗುಣವಾಗಿ ಪವಿತ್ರ ಕಾರ್ಯ ನಡೆಯುತ್ತಿದೆ.