Advertisement

ಪಂಚಲಿಂಗ ದರ್ಶನ: ಸ್ಥಳೀಯರಿಗಷ್ಟೇ ಪ್ರವೇಶ

05:12 PM Dec 09, 2020 | Suhan S |

ಮೈಸೂರು: ತಲಕಾಡು ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ 3ರ ನಂತರ ಎಲ್ಲರಿಗೂ ಪ್ರವೇಶ ನಿರ್ಬಂಧ ವಿಧಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.

Advertisement

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಂಚಲಿಂಗ ದರ್ಶನಕ್ಕೆ ತಲ ಕಾಡು, ಬಿ.ಶೆಟ್ಟಹಳ್ಳಿ, ಹೊಳೆಸಾಲು ಗ್ರಾಪಂನ ಸ್ಥಳೀಯ ರೇ35 ಸಾವಿರ ಜನ ಇರುವುದರಿಂದ ಹೊರಗಿನವರಿಗೆಪ್ರವೇಶ ಇರುವುದಿಲ್ಲ. ಈ ಸ್ಥಳೀಯರಿಗೂ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಂಜೆ ಆಗುತ್ತದೆ: ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವುದು ಕಷ್ಟ. ಆದ್ದರಿಂದ ಪಂಚಲಿಂಗದರ್ಶನಕ್ಕೆ2 ಪಾಳಿಯಲ್ಲಿ ಮಾತ್ರ ಸಿಬ್ಬಂದಿಯನ್ನುನಿಯೋಜಿಸಲಾಗುವುದು. ಮಧ್ಯಾಹ್ನ 3 ಗಂಟೆಯೊಳಗೆ ಬಂದವರಿಗೆ ಪ್ರವೇಶಾವಕಾಶ ನೀಡಿದರೆ ಅವರು ದರ್ಶನ ಮುಗಿಸಿ ಹೊರಬರುವ ವೇಳೆಗೆ ಸಂಜೆ ಆಗಿರುತ್ತದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್‌ ಹೇಳಿದರು.  ಭದ್ರತಾ ದೃಷ್ಟಿಯಿಂದ 9 ಕಡೆ ಚೆಕ್‌ಪೋಸ್ಟ್‌, ಅಗತ್ಯ ಇರುವ ಕಡೆ ಬ್ಯಾರಿಕೇಡಿಂಗ್‌ ಮಾಡಲಾಗಿದೆ. ಭಕ್ತಾದಿಗಳು ನದಿಗೆ ಇಳಿಯಬಾರದು ಎಂದರು.

ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ: ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡ ನಿಯೋಜಿಸಿದೆ. ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.5 ಆ್ಯಂಬುಲೆನ್ಸ್‌ಗಳು ಇರುತ್ತವೆ ಎಂದು ಜಿಲ್ಲಾ ಆರೋಗ್ಯ – ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್‌ ತಿಳಿಸಿದರು.ಅಗ್ನಿಶಾಮಕ ಇಲಾಖೆಯಿಂದ 2 ಅಗ್ನಿ ಶಾಮಕ ವಾಹನ, ನದಿಯಲ್ಲಿ ದೋಣಿಗಳು, ಒಬಿಎಂ, ಮುಂತಾದ ವ್ಯವಸ್ಥೆ ಮಾಡಲಾಗಿದೆ ಎಂದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಎನ್‌.ಸಿ. ವೆಂಕಟರಾಜು, ತಿ.ನರಸೀಪುರ ತಹಶೀಲ್ದಾರ್‌ ನಾಗೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next