Advertisement
ಪಟ್ಟಣದ ಶ್ರೀ ಸೋಮಶೇಖರಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು ರಥ ಪೂಜೆ ನೆರವೇರಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ವೀರಪುರವಂತರ ಒಡಪುಗಳು ಹಾಗೂ ನೂರಾರುಮೀಟರ ಉದ್ದದ ದಾರದೊಂದಿಗೆ ವೀರಪುರವಂತರು ಹಾಗೂ ಭಕ್ತರು ನಾಲಿಗೆಗೆ ಹಾಗೂ ಗಲ್ಲಕ್ಕೆ ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯ ಮೈನವಿರೇಳಿಸುವಂತಿತ್ತು. ರಥೋತ್ಸವಕ್ಕೂ ಮೊದಲು ಬಣಗಾರ ಓಣಿಯಿಂದ ನಂದಿಕೋಲುಗಳು ಪೂಜೆಗೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತಲುಪಿದವು. ಶ್ರೀ ಪಂಚಲಿಂಗೇಶ್ವರದೇವಸ್ಥಾನ ಟ್ರಸ್ಟ ಕಮೀಟಿ, ಜಾತ್ರಾ ಉತ್ಸವ ಕಮೀಟಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದಸಮುತ್ಛಯದಲ್ಲಿರುವ ಮೂರುಲಿಂಗ ದೇವರಿಗೆಬುತ್ತಿಪೂಜೆ ಕಟ್ಟಲಾಗಿತ್ತು. ಶ್ರೀ ಮಲ್ಲಿಕಾರ್ಜುನ,ಶ್ರೀ ಬೊರಮ್ಮ, ಶ್ರೀ ತ್ರ್ಯಂಬಕೇಶ್ವರ, ಶ್ರೀ ಬನಶಂಕರಿ, ನಾಗದೇವತೆ, ಶ್ರೀ ರುದ್ರಮುನೀಶ್ವರ, ಶ್ರೀ ರೇಣುಕಾಶ್ರೀ ಕಾಲಭೆ„ರವ ದೇವರಿಗೆ ರುದ್ರಾಭಿಷೇಕ, ವಿವಿಧ ಅಲಂಕಾರ ಪೂಜೆ ನೆರವೇರಿಸಲಾಗಿತ್ತು. ದೇವಸ್ಥಾನ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು.
Related Articles
Advertisement
ಬಮ್ಮನಳ್ಳಿಯ ಶಿವಯೋಗಿ ಸ್ವಾಮೀಜಿ,ಚಿಕ್ಕೋಡಿ ಸಂಪಾದನಾ ಸ್ವಾಮೀಜಿ,ಹಾರನಹಳ್ಳಿಯ ಚೇತನ ದೇವರು, ಬಿಡಿಸಿಸಿಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ, ಮಾಜಿ ಸಚಿವಎ.ಬಿ.ಪಾಟೀಲ, ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಸುರೇಶ ಬೆಲ್ಲದ, ಜಗದೀಶಕವಟಗಿಮಠ, ಸುನೀಲ ಪರ್ವತರಾವ, ಪವನಪಾಟೀಲ, ಶಿವಾನಂದ ಗಂಡ್ರೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಥೋತ್ಸವದ ನಿಮಿತ್ತ ಪಿಎಸ್‌ಐ ಗಣಪತಿ ಕೊಗನೊಳ್ಳಿ ಬಿಗಿ ಭದ್ರತೆ ಒದಗಿಸಿದ್ದರು.ರಥೋತ್ಸವದದಲ್ಲಿ ಗ್ರಾಮದ ಹಿರಿಯರುಸೇರಿದಂತೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.