Advertisement
ಮರಾಠಿಯ ಹೆಸರಾಂತ ದೈನಿಕ ಲೋಕಸತ್ತಾ “ಮಹಾರಾಷ್ಟ್ರಕ್ಕೂ ಒಬ್ಬ ಪಾಟೀಲ ಪುಟ್ಟಪ್ಪ ಬೇಕಾಗಿ¨ªಾರೆ’ ಎಂಬುದಾಗಿ ಸಂಪಾದಕೀಯ ಬರೆದದ್ದು ಪಾಟೀಲ ಪುಟ್ಟಪ್ಪ ಅವರ ಕೃತುಶಕ್ತಿಗೆ ಸಾಕ್ಷಿ.
Related Articles
Advertisement
“ನೂರಕ್ಕೊಬ್ಬ ವೀರ, ಸಾವಿರಕ್ಕೊಬ್ಬ ಧೀರ, ಹತ್ತು ಸಾವಿರಕ್ಕೊಬ್ಬ ಮಾತುಗಾರ’ ಎಂಬ ಸುಭಾಷಿತವಿದೆ. ಪಾಪು ನಮ್ಮ ನಾಡು ಕಂಡ ವಿರಳ ವಾಗ್ಮಿಗಳಲ್ಲಿ ಒಬ್ಬರು. ಪಾಟೀಲ ಪುಟ್ಟಪ್ಪನವರ ಸ್ಮರಣಶಕ್ತಿ ಅದ್ಭುತವಾದುದು. ಕರ್ನಾಟಕ ಇತಿಹಾಸ, ಪರಂಪರೆ ಸಮಕಾಲೀನ ಘಟನೆ, ವಿದ್ಯಮಾನಗಳನ್ನು ಪುಂಖಾನುಪುಂಖವಾಗಿ ಹೇಳುವ ಅವರ ಮಾತಿನ ಧಾರೆಗೆ ಯಾರೂ ಮಂತ್ರಮುಗ್ಧರಾಗಬೇಕು. ವ್ಯಾಪಕ ಓದು, ಅಧ್ಯಯನ, ಪಾಂಡಿತ್ಯಕ್ಕೆ ಹೆಸರಾಗಿರುವ ಅವರು ಐವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿ¨ªಾರೆ. ನಲವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಕೃತಿಗಳನ್ನು ರಚಿಸಿ ಕನ್ನಡ ಪ್ರಪಂಚದ ಕ್ರಿಯಾಚೇತನವಾಗಿ ಮಿಂಚುತ್ತ ಬಂದಿ¨ªಾರೆ. ತಮ್ಮ ಸುದೀರ್ಘವಾದ ಬರವಣಿಗೆಯ ಮೂಲಕ ನಾಡಿನ ಜನತೆಗೆ ಮಾರ್ಗದರ್ಶನ ಮಾಡಿ ಅವರಲ್ಲಿ ವೈಚಾರಿಕತೆ, ರಾಷ್ಟ್ರ ಪ್ರೇಮದ ಚಿಂತನೆಯನ್ನು ಬಿತ್ತುವ ಕಾರ್ಯವನ್ನು ಅವರು ಮಾಡುತ್ತ¤ ಬಂದಿದ್ದಾರೆ. “ಅನುಭವವಿದ್ದಲ್ಲಿ ಅಮೃತತ್ವವಿದೆ’, “ಬದುಕಲು ಬೇಕು ಬದುಕುವ ಮಾತು’ ಮೊದಲಾದ ಅಂಕಣಗಳನ್ನು ಅವರು ಸುದೀರ್ಘ ಕಾಲ ಬರೆದು ದಾಖಲೆ ಮಾಡಿ¨ªಾರೆ. ಸೋತ ಬಾಳಿಗೆ ಭರವಸೆ ನೀಡುವ ಪಾಪು ವಿರಚಿತ “ಅಮೃತವಾಹಿನಿ’ “ಬದುಕುವ ಮಾತು’ ಮೊದಲಾದ ಕೃತಿಗಳು ಕನ್ನಡ ವಾš¾ಯದಲ್ಲಿ ವಿಶಿಷ್ಟವಾದ ಸ್ಥಾನಮಾನವನ್ನು ಗಳಿಸಿಕೊಂಡಿರುವುದು ಉಲ್ಲೇಖನೀಯ ಅಂಶ.
ಅಗ್ರಗಣ್ಯ ಅಂಕಣಗಾರಕನ್ನಡದ ಅಗ್ರಗಣ್ಯ ಅಂಕಣಕಾರರಲ್ಲಿ ಪಾಟೀಲ ಪುಟ್ಟಪ್ಪ ಅವರೂ ಒಬ್ಬರು. ವಿಶ್ವವಾಣಿ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ತರಂಗ, ಪ್ರಪಂಚ- ಹೀಗೆ ನಾಡಿನ ಜನಪ್ರಿಯ ದೈನಿಕ, ಮಾಸಿಕ, ಸಾಪ್ತಾಹಿಕಗಳಲ್ಲಿ ಅವರು ಬರೆದ ಅಂಕಣಗಳು ಕೃತಿ ರೂಪದಲ್ಲಿ ಬೆಳಕು ಕಂಡು ಅಪಾರ ಓದುಗ ವರ್ಗದ ಪ್ರಶಂಸೆಗೆ ಪಾತ್ರವಾಗಿವೆ. ನಡೆದಾಡುವ ವಿಶ್ವಕೋಶದಂತಿರುವ ಪಾಪು ತಮ್ಮ ಹೋರಾಟ, ಬರವಣಿಗೆ, ಮಾತು ಕೃತಿಗಳ ಮೂಲಕ ದಂತಕತೆಯಾಗಿ¨ªಾರೆ. ಪತ್ರಿಕೋದ್ಯಮ ಹಾಗೂ ವಾš¾ಯ ಸೇವೆಗಾಗಿ ಅನೇಕ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ಪಾಪು ಅವರು ಬೆಳಗಾವಿಯಲ್ಲಿ ನಡೆದ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿ¨ªಾರೆ. ತಮ್ಮ ಪ್ರತಿಭೆ, ಕ್ರಿಯಾಶೀಲ ಗುಣಗಳಿಂದಾಗಿ ಜವಾಹರಲಾಲ ನೆಹರು ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎರಡು ಅವಧಿಗೆ ಪಾಪು (1962-1974) ರಾಜ್ಯಸಭೆಯ ಸದಸ್ಯರಾಗಿ ನಾಮಕರಣಗೊಂಡು ಜನಪರ ಸೇವಾಕಾರ್ಯದಲ್ಲಿ ನಿರತರಾದರು. ಕರ್ನಾಟಕ ಸರಕಾರದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅವರು ಮಾಡಿದ ಕನ್ನಡ ಕೈಂಕರ್ಯ ಇಂದಿಗೂ ನಾಡಿನ ಜನಮಾನಸದಲ್ಲಿ ಹಸಿರಾಗಿದೆ. ಅವರು ನಿಷ್ಠುರವಾದಿ. ಕಾರಂತರಂತೆ ಕಂಡದ್ದನ್ನು ಕಂಡಂತೆ ಹೇಳುವುದು ಅವರ ಸ್ವಭಾವ. ಶ್ರದ್ಧೆ, ಪ್ರಾಮಾಣಿಕತೆ, ನಿಚ್ಚಳ ವಿಚಾರ ಸರಣಿ, ಅವಿಶ್ರಾಂತ ದುಡಿಮೆ- ಹೀಗೆ ಏನೆಲ್ಲವನ್ನು ಒಳಗೊಂಡ ಆದರ್ಶ ವ್ಯಕ್ತಿತ್ವ ಅವರದು. ನಾಡು, ನುಡಿ, ಗಡಿಗಳ ಪ್ರಶ್ನೆ ಬಂದಾಗ ನಮಗೆ ಮೊದಲು ನೆನಪಿಗೆ ಬರುವವರು ಪಾಪು. ಅವರು ಬರೇ ವ್ಯಕ್ತಿಯಲ್ಲ; ಬಹುದೊಡ್ಡ ಶಕ್ತಿಯಾಗಿ ನಮ್ಮ ನಡುವೆ ಇರುವುದು ಕನ್ನಡಿಗರ ಸೌಭಾಗ್ಯ. ಪಾಟೀಲ ಪುಟ್ಟಪ್ಪ ಕನಸಿನಲ್ಲೂ ಕನ್ನಡ ಮಂತ್ರವನ್ನೇ ಕನವರಿಸಿದವರು. ಕನ್ನಡ ಇಂದು ಸರಾಗವಾಗಿ ಉಸಿರಾಡುತ್ತಿರುವುದಕ್ಕೆ ಕಾರಣರಾದವರಲ್ಲಿ ಪಾಪು ಅವರು ಪ್ರಮುಖರು. ಪಾಪು ಅವರದು ಚಿಕಿತ್ಸಕ ಮನೋಭಾವ. ಕೆಲವೊಮ್ಮೆ ಅವರ ಮಾತು, ಬರವಣಿಗೆ ಖಾರ ಎಂದೆನಿಸಿದರೂ ಅದರಲ್ಲಿ ಕಷಾಯದ ಗುಣವಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಇವು ಇಪ್ಪತ್ತನೆಯ ಶತಮಾನದ ಎರಡು ಮುಖ್ಯ ಚಾರಿತ್ರಿಕ ಸಂಗತಿಗಳು. ಇವುಗಳ ಒಳಹೊರಗನ್ನು ಚೆನ್ನಾಗಿ ಬಲ್ಲವರು ಪಾಪು ಅವರನ್ನು ಬಿಟ್ಟರೆ ಮತ್ತೂಬ್ಬರಿಲ್ಲ. ಮರಾಠಿಯ ಹೆಸರಾಂತ ದೈನಿಕ ಲೋಕಸತ್ತಾ “ಮಹಾರಾಷ್ಟ್ರಕ್ಕೂ ಒಬ್ಬ ಪಾಟೀಲ ಪುಟ್ಟಪ್ಪ ಬೇಕಾಗಿದ್ದಾರೆ’ ಎಂಬುದಾಗಿ ಸಂಪಾದಕೀಯ ಬರೆದದ್ದು ಪಾಟೀಲ ಪುಟ್ಟಪ್ಪ ಅವರ ಕೃತುಶಕ್ತಿಗೆ ಸಾಕ್ಷಿ. ಒಳನಾಡು, ಗಡಿನಾಡು, ಹೊರನಾಡು ಎನ್ನದೆ ಎಲ್ಲೆಡೆ ಕನ್ನಡದ ಕಹಳೆಯನ್ನು ಮೊಳಗಿಸಿದ, ಕನ್ನಡದ ಗೌರವವನ್ನು ಹೆಚ್ಚಿಸಿದ ಕನ್ನಡದ ಹೆಮ್ಮೆಯ ಪುತ್ರ ಪಾಪು ಇದೀಗ ಶತಾಯುಷಿ. ಅವರ ಮಾರ್ಗದರ್ಶನ ಸುದೀರ್ಘ ಕಾಲ ನಾಡಿಗೆ-ನುಡಿಗೆ ಸಿಗುವಂತಾಗಲಿ. ನಾಳೆ, ಧಾರವಾಡದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪರ ಜನ್ಮಶತಮಾನೋತ್ಸವ ಸಮಾರಂಭವಿದೆ. ಜಿ.ಎನ್. ಉಪಾಧ್ಯ