ಜಮಖಂಡಿ: ಪಂಚಾಚಾರ್ಯರನ್ನು ಬಸವಣ್ಣನವರನ್ನು ಬೇರ್ಪಡಿಸಲು ಕೆಲಗುಂಪು ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದು, ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಅದು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ|ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಸಂಘಟನೆಗೆ ಧಕ್ಕೆಯಾಗದ ರೀತಿಯಲ್ಲಿ ಜಯಂತಿ ಆಚರಣೆಯಾಗಿದೆ ವಿನಃ ಭಿನ್ನಾಭಿಪ್ರಾಯವಿಲ್ಲ. ವೀರಶೈವ ಧರ್ಮದ ವೈಭವ ನಾವೆಲ್ಲ ಕಾಣಬೇಕಿದೆ. ಪಂಚಪೀಠಗಳಿಗೆ ಯುಗಯುಗದ ಇತಿಹಾಸವಿದೆ. ಅದಕ್ಕೆ ಯುಮಾನೋತ್ಸವ ರೇಣುಕರ ಕಾಲಮಾನ ಬೇರೆ, ಎಲ್ಲ ಪಂಚಾಚಾರ್ಯರ ಕಾಲ ಮಾನ ಬೇರೆಯಾಗಿದೆ. ರೇವಣಸಿದ್ದರು ಆದಿ ಶಂಕರಾಚಾರರಿಗೆ ಚಂದ್ರಮೌಳೀಶ್ವರ ಲಿಂಗ ದಯಪಾಲಿಸಿದ್ದಾರೆ. ಇತಿಹಾಸ ತಿಳಿದರೆ ಈ ಧರ್ಮ ಕಾಲ್ಪನಿಕವಲ್ಲ ಎಂದು ಸ್ಪಷ್ಟವಾಗುತ್ತದೆ. ಕೆಲ ಇತಿಹಾಸ ಸೂಕ್ಷವಾಗಿ ಗಮನಿಸಿ ಸಂಶೋಧನೆಯಾಗಬೇಕು. ಸಮಾಜದ ಅಖಂಡತೆ ಕಾಪಾಡಿಕೊಂಡು ಹೋಗಬೇಕು ಎಂದರು
ಸಿದ್ಧಾಂತ ಶಿಖಾಮಣಿಗೂ ಮತ್ತು ವಚನ ಸಾಹಿತ್ಯಕ್ಕೂ ವ್ಯತ್ಯಾಸವಿಲ್ಲ. ಇದಕ್ಕೆ ಶಿವಾಗಮನ ಮೂಲಕಾರಣ. ಸಂಘಟನೆ ಸಮನ್ವಯ ಒಗ್ಗೂಡಲು ನಮ್ಮ ಆಚರಣೆಯೇ ಆಗಬೇಕು. ಎರಡೂ ಪರಂಪರೆ ಗೌರವಿಸಬೇಕು. ಎಲ್ಲರೂ ಲಿಂಗ ದೀಕ್ಷೆ, ಲಿಂಗಧಾರಣೆ, ಲಿಂಗಪೂಜೆ ಮಾಡಿಕೊಂಡು ಧರ್ಮ ರಕ್ಷಣೆ ಮಾಡುವಲ್ಲಿ ಸಹಕಾರಿಯಾಗಬೇಕು. ಸರಕಾರದಿಂದ ಎಲ್ಲ ಜಯಂತಿಗಳು ಆಚರಣೆಯಲ್ಲಿದ್ದು, ಜಗದ್ಗುರು ಪಂಚಾಚಾರ್ಯರ ಜಯಂತಿ ಕೂಡ ಸರಕಾರದಿಂದ ಆಚರಿಸುವಂತಾಗಬೇಕು. ಗುರುಪೀಠ ವಿರಕ್ತಪೀಠ ಸಮಾಜದ ಎರಡು ಕಣ್ಣುಗಳು ಎಂದರು.
ಶಾಸಕ ಆನಂದ ನ್ಯಾಮಗೌಡ ಉದ್ಘಾಟಿಸಿದರು. ಉಪನ್ಯಾಸಕ ಡಾ| ಎ.ಸಿ.ವಾಲಿ, ಬಿದರಿ ಮಠದ ಶಿವಲಿಂಗಶ್ರೀ, ಕಲ್ಯಾಣಮಠದ ಗೌರಿಶಂಕರಶ್ರೀ, ಕೊಣ್ಣೂರಿನ ಹೊರಗಿನಮಠದ ಡಾ| ವಿಶ್ವಪ್ರಭುದೇವರು, ಬನಹಟ್ಟಿ ಹಿರೇಮಠದ ಶರಣಬಸವಶ್ರೀ, ಮುತ್ತಿನಕಂತಿ ಮಠದ ಶಿವಲಿಂಗಶ್ರೀ, ಜಗದೀಶ ಗುಡಗುಂಟಿಮಠ, ರಾಚಯ್ನಾ ಅಕ್ಕಿ, ರುದ್ರಯ್ನಾ ಕರಡಿ, ಅಶೋಕ ಗಾವಿ, ರಾಚಪ್ಪಾ ಕರಿಹೊನ್ನ, ಅಲ್ಲಯ್ನಾ ದೇವರಮನಿ ಇತರರು ಇದ್ದರು.
Advertisement
ನಗರದ ಕಲ್ಯಾಣಮಠದ ಮಂಗಲ ಕಾರ್ಯಾಲಯದಲ್ಲಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗದ್ಗುರು ಪಂಚಾಚಾರ್ಯ ಮತ್ತು ಬಸವಾದಿ ಶಿವಶರಣರು ಮತ್ತು ವೀರಶೈವ ಒಂದೇ ತಾಯಿ ಬೇರುಗಳು. ಮತ ಆಚರಣೆಯಲ್ಲಿ ಬೇಧವಿಲ್ಲ. ಮತ ವಿಂಗಡನೆ ಬೇರೆ ಮಾಡಲು ಸಾಧ್ಯವಿಲ್ಲ ಎಂದರು.
Related Articles
Advertisement