Advertisement

Panambur;ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

12:08 AM Aug 29, 2023 | Team Udayavani |

ಮಂಗಳೂರು: ಪಣಂಬೂರು ಐಒಸಿಎಲ್‌ ಕಂಪೆನಿಯ ಹಿಂಭಾಗದ ಕಡಲ ಕಿನಾರಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ.

Advertisement

ಪ್ರಾಯ ಸುಮಾರು 27 ರಿಂದ 30 ವರ್ಷ, ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಮೃತ ಶರೀರದ ಮೇಲೆ ನೀಲಿ ತಿಳಿ ಹಸುರು ಬಣ್ಣದ ತುಂಬು ತೋಳಿನ ಶರ್ಟ್‌, ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌, ಕಪ್ಪು ಬಣ್ಣದ ಬರ್ಮುಡಾ ಧರಿಸಿದ್ದಾರೆ. ಬಲಗೈ ಮಣಿಕಟ್ಟಿಗೆ ಕೆಂಪು ದಾರ ಕಟ್ಟಿದ್ದು, ಜನಿವಾರ ಇದೆ.

ಮೃತ ಶರೀರ ಕೊಳೆತು ಹೋಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಚಹರೆಯ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಪಣಂಬೂರು ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್‌ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next