Advertisement

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ; ಓರ್ವ ಸಾವು

04:52 PM Jun 19, 2024 | Team Udayavani |

ಪಣಜಿ: ಹಳೆ ದ್ವೇಷದಿಂದ ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗಾಯಗೊಂಡಿದ್ದ ಅಹಮ್ಮದ್ ದೇವಡಿ (30, ಮಾಪ್ಸಾ) ಗೋವಾ ವೈದ್ಯಕೀಯ ಕಾಲೇಜು ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಜೂ.18ರ ಮಂಗಳವಾರ ಮೃತಪಟ್ಟಿದ್ದಾನೆ.

Advertisement

ಈ ದಾಳಿಯಲ್ಲಿ ಸಂದೇಶ ಸಾಲ್ಕರ್ ಎಂಬ ಮತ್ತೊಬ್ಬ ಯುವಕ ಕೂಡ ಗಾಯಗೊಂಡಿದ್ದ. ಮೇ 30 ರಂದು ಈ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ 6 ಜನ ಶಂಕಿತರನ್ನು ಮಾಪ್ಸಾ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆಯೇ ಇನ್ನೋರ್ವ ಶಂಕಿತ ರಾಮಕೃಷ್ಠ ಭಲೇಕರ್ ಅಲಿಯಾಸ್ ಆರ್‍ಕೆ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರ್‍ಕೆ ಯನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ಕರ್ನಾಟಕಕ್ಕೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ಅವನ ಪತ್ತೆಯಾಗಿಲ್ಲ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಇನ್ಸ್ ಪೆಕ್ಟರ್ ನಿಖಿಲ್ ಪಾಲೇಕರ್ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಶರಣ‌ ಬಾಬು ಗೈಡಕವಾಡ, ನಾಗರಾಜ ಪೂಜಾರಿ, ಬೋರೇಶ್ ಪೂಜಾರಿ, ಶ್ರೀಧರ್ ಕಿಲ್ಲೆದಾರ್, ಅಭಿಷೇಕ್ ಪೂಜಾರಿ, ಮಂಥನ್ ಚಿಯಾರಿ ಒಳಗೊಂಡಿದ್ದಾರೆ. ಪೊಲೀಸರು ಈ ಪ್ರಕರಣದ ಹೆಚ್ಚಿನ ತನಿಖಾ ಕಾರ್ಯ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next