Advertisement

Chikkamagaluru: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

04:04 PM Sep 26, 2024 | Team Udayavani |

ಚಿಕ್ಕಮಗಳೂರು: ವಿದ್ಯುತ್ ಪ್ರವಹಿಸಿ ರೈತರೊಬ್ಬರು ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಕಾರ್ಲಗದ್ದೆ ಗ್ರಾಮದಲ್ಲಿ ಸೆ.26ರ ಗುರುವಾರ ನಡೆದಿದೆ.

Advertisement

ಕಾರ್ಲಗದ್ದೆ ಗ್ರಾಮದ ಕೃಷಿಕ ಸತೀಶ್ ಶೆಟ್ಟಿ (45 ವರ್ಷ) ಮೃತಪಟ್ಟವರು.

ಸತೀಶ್ ಎಂದಿನಂತೆ ಗುರುವಾರ ಮುಂಜಾನೆ ಗದ್ದೆಗೆ ತೆರಳಿದ್ದ ವೇಳೆ ಭತ್ತದ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ಸತೀಶ್ ಮೃತಪಟ್ಟಿರುವ ವಿಷಯ ಕುಟುಂಬದವರಿಗೆ ತಿಳಿದು ಬಂದಿದೆ.

ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next