Advertisement

Panaji: ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು… ಪೊಲೀಸರಿಂದ ಆರೋಪಿಯ ರೇಖಾಚಿತ್ರ ಬಿಡುಗಡೆ

03:22 PM Oct 01, 2024 | Team Udayavani |

ಪಣಜಿ(ವಾಸ್ಕೊ): ಗೋವಾದ ವಾಸ್ಕೊಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರೆನಾಲ್ಟ ಕ್ವಿಡ್ ಕಾರನ್ನು (ಜಿಎ-07, ಕೆ-9832) ಸಪ್ಟೆಂಬರ್ 17 ರಂದು ರಾತ್ರಿ ವೇಳೆ ವ್ಯಕ್ತಿಯೋರ್ವ ಕಳ್ಳತನ ಮಾಡಿದ್ದು ಪೋಲಿಸರು ಈತನ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೇ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪೋಲಿಸರು ತಿಳಿಸಿದ್ದಾರೆ.

Advertisement

ಕಾರು ಕಳುವು ಮಾಡಿದ ವ್ಯಕ್ತಿ ಸಾಧಾರಣ ಕಪ್ಪು ಬಣ್ಣ, ಸುಮಾರು 5.5 ಅಡಿ ಎತ್ತರ ಇದ್ದು, ಈ ವ್ಯಕ್ತಿಯ ಬಳಿ ಐಪೋನ್ ಕೂಡ ಇದ್ದು ಈತನು ಕಾರನ್ನು ಕದ್ದು ಕರ್ನಾಟಕಕ್ಕೆ ಹೋಗಿ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಆರೋಪಿಯು ಇನ್ನೂ ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು ಇನ್ನಷ್ಟು ಅಪರಾಧ ಎಸಗುವ ಮುನ್ನ ಈತನ ಪತ್ತೆಗೆ ಪೋಲಿಸರು ಹುಡುಕಾಟ ನಡೆಸಿದ್ದಾರೆ.

ಪೋಲಿಸರು ಈತನ ರೇಖಾಚಿತ್ರವನ್ನೂ ಬಿಡುಗಡೆಗೊಳಿಸಿದ್ದಾರೆ. ಈ ಕಾರು ಕಂಡಲ್ಲಿ ಅಥವಾ ಈ ಪೋಟೊದಲ್ಲಿರುವ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ದೂ:- 9370162888 ಈ ದೂರವಾಣಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಇದನ್ನೂ ಓದಿ: Davanagere: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಡೆದವರೇ ಯತ್ನಾಳ್: ರೇಣುಕಾಚಾರ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next