Advertisement

ಪಣಜಿ: ಮಣಿಪುರ ವಿಚಾರ… ಸದನದ ಬಾವಿಗಿಳಿದು ಪ್ರತಿಪಕ್ಷ ಶಾಸಕರಿಂದ ಧರಣಿ

03:32 PM Aug 02, 2023 | Team Udayavani |

ಪಣಜಿ: ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ನಿನ್ನೆ ಅಮಾನತುಗೊಂಡಿದ್ದ ಏಳು ಪ್ರತಿಪಕ್ಷಗಳ ಶಾಸಕರು ತಮ್ಮ ಅಮಾನತು ಅವಧಿ ಇಂದು ಮುಕ್ತಾಯಗೊಂಡ ನಂತರ ಮತ್ತೆ ವಿಧಾನಸಭೆಯಲ್ಲಿ ಮಣಿಪುರದ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

Advertisement

ಶಾಸಕ ವಿಜಯ್ ಸರ್ದೇಸಾಯಿ ಹೊರತುಪಡಿಸಿ ಆರು ಪ್ರತಿಪಕ್ಷಗಳ ಶಾಸಕರು ಬುಧವಾರ ಮತ್ತೆ ಸ್ಪೀಕರ್ ಮುಂದೆ ಸದನದ ಬಾವಿಗೆ ಇಳಿದು ಧರಣಿ ನಡೆಸಿ ಮಣಿಪುರದ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು  ಶಾಸಕ ಸರ್ದೇಸಾಯಿ ಅವರು ಪ್ರಸ್ತಾಪಿಸಿದ ವಿಷಯಗಳ ಆಧಾರದ ಮೇಲೆ ಅಂತಿಮವಾಗಿ ಚರ್ಚಿಸುವುದಾಗಿ ಭರವಸೆ ನೀಡಿದರು.

ವಿರೋಧ ಪಕ್ಷದ ಕೆಲ ಶಾಸಕರು ಬುಧವಾರ  ಮತ್ತೆ ಕಪ್ಪು ಬಟ್ಟೆ ತೊಟ್ಟಿದ್ದರು. ನಿನ್ನೆ ಅಧಿವೇಶನದಲ್ಲಿ ಅಮಾನತುಗೊಂಡವರಲ್ಲಿ ವಿರೋಧ ಪಕ್ಷದ ನಾಯಕರಾದ ಯೂರಿ ಅಲೆಮಾವೊ, ಎಲ್ಟನ್ ಡಿ ಕೋಸ್ಟಾ, ಕಾರ್ಲೋಸ್ ಫೆರೇರಾ, ಆರ್‍ಜಿ ಶಾಸಕ ವೀರೇಶ್ ಬೋರ್ಕರ್, ಎಎಪಿ ಶಾಸಕರಾದ ವೆಂಜಿ ವಿಗಾಸ್ ಮತ್ತು ಕ್ರೂಜ್ ಸಿಲ್ವಾ ಮತ್ತು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಸೇರಿದ್ದಾರೆ. ಸ್ಪೀಕರ್ ರಮೇಶ್ ತಾವಡ್ಕರ್ ಅವರು ಏಳು ಶಾಸಕರ ಮೇಲೆ ಎರಡು ದಿನಗಳ ಕಾಲ ಅಮಾನತುಗೊಳಿಸಿದ್ದರು ವಿಧಾನಸಭೆಯ ಮಂಗಳವಾರ ಸಂಜೆ ಅಧಿವೇಶನದಲ್ಲಿ ಸಭಾಪತಿಗಳು  ಅಮಾನತನ್ನು ಸಡಿಲಿಸಿ 24 ಗಂಟೆಗೆ ತಂದರು ಇದರಿಂದಾಗಿ ಈ ಶಾಸಕರು ಇಂದು ವಿಧಾನಸಭೆ ಹಾಜರಾಗಲು ಸಾಧ್ಯವಾಯಿತು.

ಈ ಸಮಯದಲ್ಲಿ, ಯೂರಿ ಅಲೆಮಾವ್ ತುಂಬಾ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ,  ಅಸಂಸದೀಯ ಮಾತುಗಳನ್ನಾಡಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಾವಂತ್, ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದರು. ಮುಖ್ಯಮಂತ್ರಿ ಸಾವಂತ್ ಅವರು ಮಣಿಪುರದ ವಿಷಯದ ಕುರಿತು ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು ಆದರೆ ಯಾವಾಗ ಎಂದು ಹೇಳಲಿಲ್ಲ.

ಇದನ್ನೂ ಓದಿ: Manipur ರಕ್ತಪಾತದ ಅಟ್ಟಹಾಸಕ್ಕೆ ಸ್ಥಳೀಯರಿಂದ ಎಕೆ 47, ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next