Advertisement

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

03:01 PM May 14, 2024 | Team Udayavani |

ಪಣಜಿ: ಶನಿವಾರ ಸುರಿದ ಭಾರಿ ಮಳೆಗೆ ಅಗಶಿಯಿಂದ ಜುವಾರಿ ಹೊಸ ಸೇತುವೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಜಂಟಿ ಸ್ಲ್ಯಾಬ್‍ನ ತುಂಡುಗಳು ಕುಸಿದಿವೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯ ಆವರಿಸಿದ್ದು, ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

Advertisement

ಶನಿವಾರ ರಾತ್ರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಅದರಲ್ಲಿ ಅಗಶಿಯಿಂದ ಹೊಸ ಜುವಾರಿ ಸೇತುವೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಜಂಟಿ ಸ್ಲ್ಯಾಬ್‍ನ ತುಂಡುಗಳು ಕುಸಿದಿವೆ. ರಸ್ತೆಯಲ್ಲಿ ವಾಹನ ಸಂಚಾರದ ವೇಳೆ ಸ್ಲ್ಯಾಬ್‍ಗಳು ಈ ರೀತಿ ಬಿದ್ದು ಅನಾಹುತ ಸಂಭವಿಸುವ ಆತಂಕ ಮನೆ ಮಾಡಿದೆ. ಈ ಸ್ಲ್ಯಾಬ್ ಥರ್ಮೋಸೆಲ್ ಪ್ಯಾಕಿಂಗ್ ಹೊಂದಿದೆ. ಸ್ಲ್ಯಾಬ್‍ಗಳು ಸಡಿಲಗೊಂಡು ಕುಸಿಯುತ್ತಿವೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಎಂಜಿನಿಯರ್ ಗಳಿಗೆ ನಾವು ಪದೇ ಪದೇ ತಿಳಿಸುತ್ತಿದ್ದೇವೆ. ಆದರೆ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸ್ಥಳೀಯ ಸುಕಾರಿನ್ ಗೊನ್ಸಾಲ್ವಿಸ್ ಮಾಹಿತಿ ನೀಡಿದ್ದಾರೆ.

ಮೇಲ್ಸೇತುವೆ ನಿರ್ಮಿಸುವಾಗ ಈ ಸೇತುವೆಯ ಕಾಮಗಾರಿ ಸರಿಯಾಗಿ ನಡೆದಿಲ್ಲ. ಸೇತುವೆಯಿಂದ ಮಳೆ ನೀರು ಸ್ಥಳೀಯರ ಮನೆಗಳ ಮೇಲೆ ಬೀಳದಂತೆ ಪೈಪ್‍ಗಳನ್ನು ಹಾಕಲಾಗಿದೆ. ಆದರೆ ಈ ಪೈಪ್‍ಗಳು ಕೆಲವೆಡೆ ಸೋರುತ್ತಿವೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಗಂಭೀರ ಗಮನ ಹರಿಸಿ ಪೈಪ್ ಬದಲಾಯಿಸಬೇಕು. ಜಂಟಿ ಸ್ಲ್ಯಾಬ್ ಕುಸಿಯದಂತೆ ಕ್ರಮಕೈಗೊಳ್ಳಬೇಕು ಎಂದು ಗೊನ್ಸಾಲ್ವಿಸ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

Advertisement

Udayavani is now on Telegram. Click here to join our channel and stay updated with the latest news.

Next