Advertisement

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

06:25 PM Jul 02, 2022 | Team Udayavani |

ಪಣಜಿ : ತಾಂತ್ರಿಕ ದೋಷದಿಂದ ಮಾಜಿ ಫುಟ್ಬಾಲ್ ಆಟಗಾರನ ಕಾರೊಂದು ರಸ್ತೆ ಮಧ್ಯೆ ಹೊತ್ತಿ ಉರಿದ ಘಟನೆ ಮಡಗಾಂವ್ ದಾಮೋದರ ಮಹಾವಿದ್ಯಾಲಯದ ಬಳಿ ನಡೆದಿದೆ.

Advertisement

ಕಾರಿಗೆ ಬೆಂಕಿ ಹತ್ತಿದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರೂ , ಅಷ್ಟೋತ್ತಿಗಾಗಲೇ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಕಾರು ಮಾಜಿ ಫುಟ್‍ಬಾಲ್ ಆಟಗಾರ ಕ್ಲಿಮ್ಯಾಕ್ಸ್ ಲಾರೆನ್ಸ್ ಅವರಿಗೆ ಸೇರಿದ್ದಾಗಿದ್ದು, ರಿಪೇರಿಗೆಂದು ಗ್ಯಾರೇಜ್ ಗೆ ನೀಡಿದ್ದರು, ಕಾರು ಮೆಕಾನಿಕ್ ಪ್ರಮೀಣ ಎನ್ನುವವರು ಟೆಸ್ಟ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ದಾಮೋದರ ಮಹಾವಿದ್ಯಾಲಯದ ಬಳಿ ಆಗಮಿಸುತ್ತಿದ್ದಂತೆಯೇ ಕಾರಿನಲ್ಲಿ ಹೊಗೆ ಕಾಣಿಸಿಕೊಂಡು ಬೆಂಕಿಗಾಹುತಿಯಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ : Watch: ಜೈಪುರ- ಕನ್ನಯ್ಯಲಾಲ್ ಹತ್ಯೆಗೈದ ನಾಲ್ವರು ಹಂತಕರಿಗೆ ಕೋರ್ಟ್ ಹೊರಗೆ ಥಳಿತ

Advertisement
Advertisement

Udayavani is now on Telegram. Click here to join our channel and stay updated with the latest news.

Next