Advertisement

Panaji: ಪತ್ನಿಯನ್ನು ಕೊಂದ ಪತಿ; ಬಂಧನ

02:51 PM May 25, 2024 | Kavyashree |

ಪಣಜಿ: ಪತಿಯೇ ಪತ್ನಿಯನ್ನು ಕೊಂದ ಆಘಾತಕಾರಿ ಘಟನೆ ವಾಸ್ಕೋದ ಶಾಂತಿನಗರದಲ್ಲಿ ನಡೆದಿದೆ.

Advertisement

ಕೌಟುಂಬಿಕ ಕಲಹದ ಹಿನ್ನೆಲೆ ಆರೋಪಿ, ಪತಿ ಚಲೋಬಾ ಕೇಸರಕರ್ ಪತ್ನಿ ಚೈತಾಲಿಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಚೈತಾಲಿ ಅವರ ತಂದೆ ಹೇಳುವಂತೆ ಆಕೆಯ ಪತಿ ಚಲೋಬಾ ಕಳೆದ 3 ವರ್ಷಗಳಿಂದ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪತ್ನಿಯನ್ನು ಕೊಂದಿದ್ದಾನೆ.

ಇದಾದ ಬಳಿಕ ಮನೆಯ ಬಾಗಿಲಿಗೆ ಕಬ್ಬಿಣದ ರಾಡ್ ಹಿಡಿದು ಮನೆ ಪ್ರವೇಶಿಸದಂತೆ ತಡೆಯಲು ಆರಂಭಿಸಿದರು. ಈ ಬಗ್ಗೆ ಮಾಹಿತಿ ಪಡೆದ ಚೈತಾಲಿಯ ತಂದೆ ಆಕೆಯ ಅತ್ತೆಯ ಬಳಿ ಧಾವಿಸಿ ಅಳಿಯನನ್ನು ಬಲವಂತವಾಗಿ ಪಕ್ಕಕ್ಕೆ ತಳ್ಳಿ ಒಳ ಪ್ರವೇಶಿಸಿದ್ದಾರೆ. ಆಗ ಅವರ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿತು.

ಕೂಡಲೇ ಅವರು ವಾಸ್ಕೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಪಂಚನಾಮೆಯ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಈ ಮಧ್ಯೆ, ಈ ಕೊಲೆಗೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next