ನವದೆಹಲಿ: ಆಧಾರ್ ಸಂಖ್ಯೆ ಜತೆಗೆ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಆಗಸ್ಟ್ 31ರೊಳಗೆ ಜೋಡಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಸೋಮವಾರ ಅಂತಿಮ ಗಡುವನ್ನು ನೀಡಿದೆ.
ಆಧಾರ್, ಪ್ಯಾನ್ ಜೋಡಣೆಯ ಬಳಿಕವೇ ಆದಾಯ ತೆರಿಗೆ ಸಲ್ಲಿಕೆಯ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ತಿಳಿಸಿದೆ. ಆಧಾರ್ ಜತೆ ಪ್ಯಾನ್ ಸಂಖ್ಯೆಯನ್ನು ಆಗಸ್ಟ್ 31ರೊಳಗೆ ಜೋಡಿಸುವಂತೆ ವಿತ್ತ ಸಚಿವಾಲಯ ತಿಳಿಸಿದೆ. ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ಕೇಂದ್ರ ಆಗಸ್ಟ್ 5ರವರೆಗೆ ವಿಸ್ತರಿಸಿರುವುದಾಗಿ ಸೋಮವಾರ ತಿಳಿಸಿತ್ತು. ಐಟಿ ರಿಟರ್ನ್ಸ್ ಗೆ ಇಂದು ಕೊನೆಯ ದಿನವಾಗಿತ್ತು.
ಒಂದು ವೇಳೆ ಆಧಾರ್ ಜತೆ ಪ್ಯಾನ್ ಸಂಖ್ಯೆ ಜೋಡಣೆ ಮಾಡದಿದ್ದರೆ ಪ್ಯಾನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.