Advertisement

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

06:41 PM Oct 28, 2020 | sudhir |

ಮಣಿಪಾಲ್‌: ಬ್ಯಾಂಕ್‌ ಆಧಾರಿತ ವಿವಿಧ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್‌ ಈಗ ಇ ಪ್ಯಾನ್‌ ಕಾರ್ಡ್‌ ಆಗಿ ಬದಲಾಗಿದೆ. ಆಧಾರ್‌ ಕಾರ್ಡ್‌ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್‌ ಕಾರ್ಡ್‌ ಪಡೆಯುವ ಯೋಜನೆಯಂತೆ ಹಲವಾರು ಮಂದಿ ಹೊಸ ಕಾರ್ಡ್‌ ಪಡೆದುಕೊಂಡಿದ್ದಾರೆ. ಆದರೆ, ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ? ಎಂಬುದರ ವಿವರ ಇಲ್ಲಿದೆ.

Advertisement

ಏನಿದು ಇ ಪ್ಯಾನ್‌?
ಎಲೆಕ್ಟ್ರಾನಿಕ್‌-ಪ್ಯಾನ್‌ ಕಾರ್ಡ್‌ ಇದರ ವಿಸ್ತೃತ ರೂಪ. ಇ ಪ್ಯಾನ್‌ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್‌ ಕಾರ್ಡ್‌ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್‌ ಕಾರ್ಡ್‌ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್‌ ಕಾರ್ಡ್‌ ಹೊಂದಿರುವವರು ಹಾಗೂ ಹೊಸ ಪ್ಯಾನ್‌ ಕಾರ್ಡ್‌ದಾರರು ಇ ಪ್ಯಾನ್‌ ಪಡೆದುಕೊಳ್ಳಬಹುದು.

ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?
– Tin & NSDL ಹಾಗೂ UTIITSL ಅಧಿಕೃತ ವೆಬ್‌ ತಾಣಕ್ಕೆ ಭೇಟಿ ನೀಡಿ.
– ಮುಖ್ಯಪುಟದ ಸರ್ವೀಸ್‌ ಆಯ್ಕೆಯಲ್ಲಿ ‘PAN’ ಆರಿಸಿಕೊಳ್ಳಿ
– ಹೊಸ ಪುಟದಲ್ಲಿ ಡೇಟಾ ಆಯ್ಕೆಯಲ್ಲಿ ಬದಲಾವಣೆ/ತಿದ್ದುಪಡಿ ಆಯ್ಕೆ ಮೇಲೆ Apply ಮಾಡಿ
– PAN ಸಂಖ್ಯೆ, ಮತ್ತೆ ಪ್ರಿಂಟ್‌ ಮಾಡುವ ಪ್ಯಾನ್‌ ಕಾರ್ಡ್‌ ಆಯ್ಕೆ ಮಾಡಿಕೊಳ್ಳಿ.
– Correct ಕೆಟಗೆರಿಯಲ್ಲಿ ಬೇರೆ ಆಯ್ಕೆ ಮಾಡಿಕೊಳ್ಳಿ.
– ಹೆಸರು, ಹುಟ್ಟಿದ ದಿನಾಂಕ, ಇಮೇಲ್‌ ಐಡಿ ಬದಲಾವಣೆ ಮಾಡಿ ಸಬ್ಮಿಟ್‌ ಮಾಡಿ.
– PAN ಅಪ್ಲಿಕೇಷನ್‌ ಅರ್ಜಿ ಮೇಲೆ ಕ್ಲಿಕ್‌ ಮಾಡಿ
– ಇ ಕೆವೈಸಿ ಸ್ಕ್ಯಾನ್‌ ಪ್ರತಿ ಸಲ್ಲಿಸಬೇಕಾಗುತ್ತದೆ
– ಹೆಸರು, ವಿಳಾಸ, ವಯಸ್ಸು ದೃಢೀಕರಣ ಪತ್ರ, ಐಡಿ ದಾಖಲೆ, ಇತ್ಯಾದಿ ದಾಖಲೆ ಸಲ್ಲಿಸಬೇಕಾಗುತ್ತದೆ.
– NSDL ಆನ್‌ ಲೈನ್‌ ಕಚೇರಿ ಮೂಲಕವೇ ದಾಖಲೆ ಸಲ್ಲಿಸಿ, ಇ ಪೇಮೆಂಟ್‌ ಮಾಡಿ ರಸಿತಿ ಪಡೆಯಬಹುದು. ಇದಾದ ಬಳಿಕ ತಿದ್ದುಪಡಿಯನ್ನು ಮಾಡಲಾಗುತ್ತದೆ.

ಇ ಪ್ಯಾನ್‌ ಕಾರ್ಡ್‌ ಪಡೆಯುವುದು ಹೇಗೆ?
– UTI & ITSL ಮೂಲಕ ಹೊಸ ಪ್ಯಾನ್‌ ಪಡೆಯಲು ಬಯಸುವವರು ಹಾಗೂ ಪ್ಯಾನ್‌ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್‌ ಲೈನ್‌ ನಲ್ಲಿ ಇ-ಪ್ಯಾನ್‌ ಕಾರ್ಡ್‌ NSDL ಹಾಗೂ UTIITSL ಅಧಿಕೃತ ವೆಬ್‌ ತಾಣಕ್ಕೆ ಭೇಟಿ ನೀಡಿ
– ಡೌನ್‌ ಲೋಡ್‌ ಇ ಪ್ಯಾನ್‌ ಕಾರ್ಡ್‌ ಕ್ಲಿಕ್‌ ಮಾಡಿ
– ಚಾಲ್ತಿ ಪ್ಯಾನ್‌ ಬದಲಾವಣೆ ಬಯಸುವವರು PAN, ಆಧಾರ್‌, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ.
– ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್‌ ಬ್ಯಾಕಿಂಗ್‌ ಮೂಲಕ ಪಾವತಿಸಿ.
– 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ.
– ಪರಿಶೀಲನೆ ನಂತರ ನಿಮ್ಮ ಪ್ಯಾನ್‌ ಕಾರ್ಡ್‌ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ. ಆದರೆ,ಇ ಪ್ಯಾನ್‌ ತತ್‌ಕ್ಷಣವೇ ಸಿಗುವುದರಿಂದ ಆದಾಯ ತೆರಿಗೆ ಇಲಾಖೆಯು ಕಾರ್ಡ್‌ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next