Advertisement
ರಾಜ್ಯದಲ್ಲಿ ಎಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕಾಯಿಲೆ ಪತ್ತೆಗೆ ಬೆಂಗಳೂರು ಹಾಗೂ ಮಣಿಪಾಲದಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳಿವೆ. ಇತರೆ ಜಿಲ್ಲೆಗಳ ರೋಗಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಈ ಎರಡೇ ಕೇಂದ್ರಗಳಿಗೆ ತರಬೇಕಾದ ಅನಿವಾರ್ಯತೆಯಿದೆ. ಪರೀಕ್ಷೆಯ ವರದಿ ರೋಗಿ ಕೈಸೇರಲು ವಾರವಾಗುತ್ತಿದೆ. ಎಚ್1ಎನ್1 ಕಾಯಿಲೆ ದೃಢೀಕರಣ ವರದಿ ಕೈಸೇರುವ ವರೆಗೆ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಾಯಿಲೆ ತೀವ್ರಗೊಂದು ಕೆಲವೊಮ್ಮೆ ಅಸುನೀಗುವ ಸಾಧ್ಯೆತೆಯಿರುತ್ತದೆ. ಇನ್ನು ಕೆಲವು ಪ್ರರಣಗಳಲ್ಲಿ ರೋಗಿ ಸಾವನ್ನಪ್ಪಿದ ಬಳಿಕ ಎಚ್1ಎನ್1 ದೃಢಪಟ್ಟಿರುವ ವರದಿಗಳು ಬಂದಿರುವ ಉದಾಹರಣೆಗಳು ಇವೆ.
Related Articles
Advertisement
ಅಂಗೈಯಲ್ಲಿಯೇ ಲ್ಯಾಬ್ಸಾಮಾನ್ಯವಾಗಿ ಎಲ್ಲ ರೀತಿಯ ಕಾಯಿಲೆಗಳನ್ನು ಪತ್ತೆ ಮಾಡುವ ಯಂತ್ರೋಪಕರಣಗಳನ್ನು ಹೊಂದಿರುವಂತಹ ಒಂದು ಪಾಥ್-ಲ್ಯಾಬ್ ನಿರ್ಮಾಣಕ್ಕಾಗಿ ಕೋಟ್ಯಂತರ ರೂ. ವೆಚ್ಚವಾಗುತ್ತದೆ. ಆದರೆ, ಈ ಉಪಕರಣಗಳನ್ನು ಇರಿಸಲು ಯಾವುದೇ ಕಟ್ಟಡದ ಅಗತ್ಯವಿಲ್ಲ. ಬದಲಿಗೆ ಅಂಗೈ ಲ್ಯಾಬ್ ಇದಾಗಿದ್ದು, ಈ ಉಪಕರಣಗಳನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದ್ದು, ಒಟ್ಟಾರೆ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡುವಂತಹ ಯಂತ್ರಗಳಿಗೆ ಒಟ್ಟಾರೆಯಾಗಿ 15 ರಿಂದ 20 ಲಕ್ಷ ವೆಚ್ಚವಾಗಲಿದೆ ಎಂದು ಸಂಸ್ಥೆಯ ತಂತ್ರಜ್ಞ ಕಪಿಲ್ ತಿಳಿಸಿದ್ದಾರೆ. ಬೆಳೆಯ ಕಾಯಿಲೆ ಪತ್ತೆ ಮಾಡಬಹುದು
ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವಂತಹ ಲ್ಯಾಂಪ್ (ಲೂಪ್ ಮೀಡಿಯೇಟೆಡ್ ಐಸೋಥರ್ಮಲ್ ಆಂಪ್ಲಿಫಿಕೇಷನ್) ಉಪಕರಣದಿಂದಾಗಿ ಕೃಷಿ ಬೆಳೆಗಳಿಗೆ ತಗುಲಿದ ಕಾಯಿಲೆಗಳನ್ನು ಪತ್ತೆ ಮಾಡಬಹುದಾಗಿದೆ. ಅತ್ಯಂತ ಚಿಕ್ಕದಾದ ಈ ಉಪಕರಣದಲ್ಲಿ ಬೆಳೆಯ ಡಿಎನ್‌ಎ ಪರೀಕ್ಷೆ ನಡೆಸಲಿದ್ದು, ಬೆಳೆ ಉತ್ತಮವಾಗಿದೆಯೇ ಅಥವಾ ಯಾವುದಾದರೂ ಕಾಯಿಲೆ ತಗುಲಿದೆ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮಗಳನ್ನು ರೈತರು ತೆಗೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಸುಜಿತ್ ವಿಜಯನ್ ತಿಳಿಸಿದರು. – ವೆಂ. ಸುನೀಲ್‌ಕುಮಾರ್