ಗಂಗಾವತಿ: ಇತಿಹಾಸ ಪ್ರಸಿದ್ಧ ರಾಜ್ಯದ ಪುರಾತನ ಜಾತ್ರೆಗಳಲ್ಲಿ ಒಂದಾಗಿರುವ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ಜಾತ್ರಮಹೋತ್ಸವದ ರಥೋತ್ಸವ ರಥಸಪ್ತಮಿಯಂದು ಶನಿವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಳೆದ ಒಂದು ವಾರದಿಂದ ಧಾರ್ಮಿಕ ವಿಧಿವಿಧಾನಗಳ ಮೂಲಕ ಜಾತ್ರಮಹೋತ್ಸವದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲ ಮಾದರಿಯ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇಗುಲದಲ್ಲಿಯೂ ಹಂಪಿಯಂತೆ ಹಲವು ಕಾರ್ಯಕ್ರಮ ಜರುಗುತ್ತವೆ. ರಥಸಪ್ತಮಿಯಂದು ರಾಜ್ಯದ 108 ದೇಗುಲಗಳ ರಥೋತ್ಸವ ಜರುಗುವಂತೆ ಹಿರೇಜಂತಗಲ್ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ಜಾತ್ರೆಯ ರಥೋತ್ಸವ ಜರುಗುತ್ತದೆ.
ಮಹಾರಥೋತ್ಸವದ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ತಹಸೀಲ್ದಾರ್ ಯು.ನಾಗರಾಜ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀ ನಾಥ,ಎಚ್.ಆರ್.ಚನ್ನಕೇಶವ, ಎಸ್ ರಾಘವೇಂದ್ರ ಶೆಟ್ಟಿ ಸೇರಿ ಸ್ಥಳೀಯ ಮುಖಂಡರಿದ್ದರು.
ಇದನ್ನೂ ಓದಿ: ಇಸ್ರೇಲ್‌ನಲ್ಲಿ ಉಗ್ರರ ದಾಳಿ: 7 ಸಾವು; 3 ಮಂದಿಗೆ ಗಾಯ