Advertisement

ಶಬರಿಮಲೆ: ಪಂಪಾ ನದಿಯಲ್ಲಿ ಹಾಗೇ ಉಳಿದಿದೆ ಜಲಪ್ರಳಯದ ಕರಾಳ ಛಾಯೆ

04:14 PM Jan 14, 2020 | keerthan |

ಶಬರಿಮಲೆ: ಕೇರಳದ ಜಲಪ್ರಳಯ ಶತಮಾನದ ಪ್ರಾಕೃತಿಕ ದುರಂತಗಳಲ್ಲಿ ಒಂದು. ರಾಜ್ಯದ ನದಿಗಳೆಲ್ಲಾ ಉಕ್ಕಿ ಹರಿದು, ಅಲ್ಲೋಲ‌ ಕಲ್ಲೋಲ ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ. ಆನಂತರ ಮಳೆಯ ಪ್ರಮಾಣ ಕಡಿಮೆಯಾಗಿ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಪಟ್ಟ ಪಾಡು ತಿಳಿಯದವರು ಯಾರು ಇಲ್ಲ.

Advertisement

ಈ ಜಲಪ್ರಳಯಕ್ಕೆ ಸಿಕ್ಕ ಶಬರಿಮಲೆ ಕ್ಷೇತ್ರಕ್ಕೆ ದೈವೀಕ ಸಂಬಂಧವಿರುವ ಪಂಪಾ ನದಿಯೂ ಈಗಲೂ ಜಲಪ್ರಳಯದ ಕರಾಳ ಛಾಯೆಯನ್ನು ತೋರಿಸುತ್ತಿದೆ.

ತುಂಬಿ ಹರಿಯುತ್ತಿದ್ದ ಪಂಪಾನದಿಯ ತುಂಬಾ ಮರಳಿನ ರಾಶಿ ಹಾಗೇ ಇದೆ. ಜಲಪ್ರಳಯವಾಗಿ ವರ್ಷ ಎರಡಾದರೂ ಪಂಪಾ ಸ್ಥಿತಿ ಬದಲಾಗಿಲ್ಲ.

ಪಂಪಾ‌ ನದಿಯು ಈಗ ಕೇವಲ‌ ಸಣ್ಣ ತೊರೆಯಂತೆ ಹರಿಯುತ್ತಿದೆ.ಅಯ್ಯಪ್ಪ ಸ್ವಾಮಿಯ ಪೂರ್ವ ಹಿನ್ನೆಲೆಯಲ್ಲಿ ಇದೇ ಪಂಪಾ ನದಿಯ ತೀರದಲ್ಲಿ ಪಂದಳರಾಜ ರಾಜಶೇಖರ ಅವರಿಗೆ ಮಣಿಕಂಠ ದೊರಕಿದ್ದು ಎಂಬ ಐತಿಹ್ಯವಿರುವುದರಿಂದ ಶಬರಿಮಲೆಗೆ ಬರುವ ಎಲ್ಲಾ ಭಕ್ತಾದಿಗಳು ಪಂಪಾನದಿಯಲ್ಲಿ ಪುಣ್ಯ ಸ್ನಾನ ಮಾಡಿಯೇ ನೀಲಿಮಲೆ, ಶಬರಿ‌ ಪೀಠ, ಅಪ್ಪಾಚಿ‌ಮೇಡು ಏರಿ ಪವಿತ್ರ ಶಬರಿಮಲೆಯ ಸ್ವಾಮಿ ಅಯ್ಯಪ್ಪ ನ ಸನ್ನಿಧಾನಕ್ಕೆ ಹೋಗುತ್ತಾರೆ.

Advertisement

ಆದರೆ ಈ ಹಿಂದಿನ ಪಂಪಾ ನದಿಯ ಸೊಬಗು ಈಗಿಲ್ಲ ಎಂಬ ವೇದನೆ ಎಲ್ಲಾ ಭಕ್ತರಿಗೆ ಭಾಸವಾಗುತ್ತಿರಿವುದು ಸುಳ್ಳಲ್ಲ‌. ಪಂಪಾ ನದಿಯ ಹಿಂದಿನ ಸೊಬಗು ಕಾಣಲು ನದಿಯಲ್ಲಿ ಲೋಡ್‌‌ಗಟ್ಟಳೆ ಬಿದ್ದಿರುವ ಮರಳಿನ ರಾಶಿ ತೆರವು ಮಾಡಬೇಕಿದೆ.

ನದಿಗೆ ಬಟ್ಟೆ ಎಸೆಯದಂತೆ ಸೂಚನೆ

ಪಂಪಾನದಿಯಲ್ಲಿ ಅಯ್ಯಪ್ಪ ಭಕ್ತಾದಿಗಳು ತಮ್ಮ ಬಟ್ಟೆಗಳನ್ನು ತೇಲಿಬಿಡುತ್ತಿದ್ದು, ಇದರಿಂದಲೂ ಪಂಪಾನದಿಯ ಪವಿತ್ರತೆಗೆ ಧಕ್ಕೆಯಾಗುತ್ತದೆ. ಈ ಬಟ್ಟೆಗಳಿಂದ ನದಿ ತೀರದಲ್ಲಿ ರಾಶಿಯಾಗುತ್ತಿದೆ. ಸ್ವಚ್ಚತಾ ಸಿಬಂದಿಗಳು ನದಿಯಿಂದ ನಿರಂತರವಾಗಿ ಬಟ್ಟೆಗಳನ್ನು ತೆರವು ಮಾಡುತ್ತಿದ್ದಾರೆ.

ಇದಕ್ಕಾಗಿ ಭಕ್ತಾದಿಗಳು ಪಂಪಾನದಿಯಲ್ಲಿ ಯಾವುದೇ ಬಟ್ಟೆಗಳನ್ನು ಎಸೆಯದೇ ಕ್ಷೇತ್ರದ ಪಾವಿತ್ರ್ಯತೆ ರಕ್ಷಣೆ ಹಾಗೂ ಸ್ವಚ್ಛ ಶಬರಿಮಲೆ ಪರಿಕಲ್ಪನೆಗೆ ಸಹಕರಿಸುವಂತೆ ತಿರಾವೂಂಕೂರು ದೇವಸ್ವಂ ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next