ಸುಮಾರು 8 ವರ್ಷದ ಗಂಡು ಚಿರತೆ ಕಳೆದ ಕೆಲವು ಸಮಯದಿಂದ ಊರಿಗೆ ನುಗ್ಗಿ ನಾಟಿಕೋಳಿ, ಸಾಕುನಾಯಿಗಳನ್ನು ಕೊಂದು ತಿನ್ನುತ್ತ ಸ್ಥಳೀಯರ ನಿದ್ದೆಗೆಡಿಸಿತ್ತು. ಅವರ ಆಗ್ರಹದ ಮೇರೆಗೆ ಅರಣ್ಯ ಇಲಾಖೆ ಸಿಬಂದಿ ಪಾಂಬೂರು ದಿಂಡೊಟ್ಟು ಜಾರ್ಜ್ ಫ್ಲೋರಿನ್ ಸಲ್ದಾನ ಅವರ ಮನೆಯ ಸಮೀಪ ಬೋನು ಇರಿಸಿದ್ದರು. ಮೂರು ದಿನಗಳ ಬಳಿಕ ಚಿರತೆ ಬೋನಿಗೆ ಬಿದ್ದಿದ್ದು, ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
Advertisement
ಉದಯವಾಣಿ ವರದಿಪಾಂಬೂರು ಪರಿಸರದಲ್ಲಿ ಚಿರತೆ ಹಾವಳಿಯ ಬಗ್ಗೆ ಜು. 4ರಂದು ಉದಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ಬಂಟಕಲ್ಲಿನ ಪೋಸ್ಟ್ ಮಾಸ್ಟರ್‌ಪಡುಬೆಳ್ಳೆ ಸಡಂಬೈಲಿನ ಭಾಸ್ಕರ ಶೆಟ್ಟಿ ಅವರ ಮನೆಯಂಗಳಕ್ಕೆ ಬಂದ ಚಿರತೆ ಮನೆಯವರ ಎದುರೇ ಸಾಕುನಾಯಿಯನ್ನು ಎಳೆದು ಕೊಂಡು ಹೋಗಿತ್ತು. ಚಿರತೆ ಗಾತ್ರ ದಲ್ಲಿ ದೊಡ್ಡದಿದ್ದು ನಾಯಿಯನ್ನು ಕಚ್ಚಿ ಸರಾಗವಾಗಿ ಎತ್ತಿಕೊಂಡು ಹೋಗಿತ್ತು ಎಂದು ಭಾಸ್ಕರ ಶೆಟ್ಟಿ ತಿಳಿಸಿ ದ್ದರು. ಇದರಿಂದ ಎಚ್ಚೆತ್ತ ಅರಣ್ಯಾಧಿ ಕಾರಿಗಳು ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನು ಇಟ್ಟಿದ್ದರು.
ಪಾಂಬೂರು ಪರಿಸರದ ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ಚಿರತೆ ಯನ್ನು ವೀಕ್ಷಿಸಲು ಅರಣ್ಯಾಧಿ ಕಾರಿಗಳು ಅವಕಾಶ ಕಲ್ಪಿಸಿ ಕೊಟ್ಟಿದ್ದರು. ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಮತ್ತು ಉಪ ವಲಯ ಅರಣ್ಯಾಧಿಕಾರಿ ದಯಾನಂದ ಕೆ. ಅವರ ಮಾರ್ಗದರ್ಶನದಂತೆ ಬೆಳ್ಳೆ ಗಸ್ತಿನ ಅರಣ್ಯ ರಕ್ಷಕ ಗಣಪತಿ ನಾಯಕ್ ಮತ್ತು ಅರಣ್ಯ ವೀಕ್ಷಕ ಪರಶುರಾಮ ಮೇಠಿ ಕಾರ್ಯಾ ಚರಣೆ ನಡೆಸಿದ್ದರು.
Related Articles
Advertisement