Advertisement

Palestine: 2 ದೇಶ ಸ್ಥಾಪಿಸಿ; ಶಾಂತಿ ಉಂಟಾಗಲಿ: ಅರಿಂದಂ ಬಗಚಿ

12:27 AM Oct 20, 2023 | Team Udayavani |

ಹೊಸದಿಲ್ಲಿ: ಪ್ಯಾಲೆಸ್ತೀನ್‌ ವಿಚಾರದಲ್ಲಿ ಹಿಂದಿನಿಂದಲೂ ಕೇಂದ್ರ ನಿಲುವು ಬದಲಾಗಿಲ್ಲ. ಎರಡು ದೇಶಗಳನ್ನು ಸ್ಥಾಪಿಸಿ, ಪ್ಯಾಲೆಸ್ತೀನಿಯರಿಗೆ ಪ್ರತ್ಯೇಕ ಮಾನ್ಯತೆ ನೀಡುವುದರ ಬಗ್ಗೆ ಸರಕಾರ ಬೆಂಬಲ ನೀಡುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ, ಯುದ್ಧದ ಪರಿಸ್ಥಿತಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಮಾತುಕತೆ ನಡೆಸಬೇಕು ಎನ್ನುವುದು ನಮ್ಮ ಸಲಹೆ ಎಂದರು. ಇದರಿಂದಾಗಿ ಇಸ್ರೇಲ್‌ಗ‌ೂ ನೆಮ್ಮದಿಯ ದಿನಗಳು ಉಂಟಾಗಬೇಕು ಎಂದಿದ್ದಾರೆ.

“ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧದಲ್ಲಿ ಅಮಾಯಕ ಜನರಿಗೆ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಬಗೆಗಿನ ಕಾನೂನುಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನಿಗಾ ವಹಿಸಬೇಕು. ಅ.7ರಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬೆಳವಣಿಗೆಗಳು ಕಳವಳಕಾರಿಯಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಎಲ್ಲ ರೀತಿಯ ಭಯೋತ್ಪಾದನೆಗೆ ಬೆಂಬಲ ನೀಡುವುದರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಬೇಕು ಎಂದು ಬಗಚಿ ಹೇಳಿದ್ದಾರೆ.

1,200 ಮಂದಿ ಆಗಮನ: “ಆಪರೇಷನ್‌ ಅಜಯ್‌’ ಅನ್ವಯ ಇಸ್ರೇಲ್‌ನಿಂದ ಇದುವರೆಗೆ ಐದು ವಿಮಾನಗಳಲ್ಲಿ 1,200 ಮಂದಿ ಆಗಮಿಸಿದ್ದಾರೆ. ಈ ಪೈಕಿ 18 ಮಂದಿ ನೇಪಾಲಿಗಳೂ ಸೇರಿದ್ದಾರೆ ಎಂದರು. ಗಾಜಾ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರನ್ನು ಪಾರು ಮಾಡದಂಥ ಸ್ಥಿತಿ ಇದೆ. ಅವಕಾಶ ಸಿಕ್ಕಿದ ಕೂಡಲೇ ಅವರನ್ನು ತೆರವುಗೊಳಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next