ಪಾಲಕ್ ಸೊಪ್ಪು-50 ಎಲೆ
ಹಸಿ ಮೆಣಸಿನ ಕಾಯಿ-1
ಹಸಿ ಶುಂಠಿ-1
ಪುದೀನಾ ಎಲೆ-ಎಂಟು
ಕೊತ್ತಂಬರಿ ಸೊಪ್ಪು-ಅರ್ಧ ಕಪ್
ಗೋಧಿ ಹಿಟ್ಟು-1.5 ಕಪ್
ಓಮದ ಕಾಳು-ಅರ್ಧ ಚಮಚ
ಜೀರಿಗೆ-ಅರ್ಧ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಎಣ್ಣೆ-ಪೂರಿಗೆ ಸಾಕಾಗುಷ್ಟು
Advertisement
ಮಾಡುವ ವಿಧಾನ:ನೀರು ಕುದಿಯಲಿಡಬೇಕು. ಕುದಿದ ನೀರಿಗೆ 50 ಎಲೆ ಪಾಲಕ್ ಸೊಪ್ಪು ಹಾಕಿ 4 ನಿಮಿಷ ಕುದಿಸಬೇಕು. ಬಳಿಕ ಬಿಸಿ ನೀರನ್ನು ಬಸಿದು ಪಾಲಕ್ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ 1 ಹಸಿ ಮೆಣಸಿನ ಕಾಯಿ, ಒಂದು ಇಂಚು ಗಾತ್ರದ ಹಸಿ ಶುಂಠಿ, ಎಂಟು ಪುದೀನಾ ಎಲೆ, ಅರ್ಧ ಕಪ್ ಕೊತ್ತಂಬರಿ ಸೊಪ್ಪು ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ರುಬ್ಬಿ. ಅನಂತರ ಅದನ್ನು ಇನ್ನೊಂದು ಪಾತ್ರೆಗೆ ಹಾಕಿ 1.5 ಕಪ್ ಗೋಧಿ ಹಿಟ್ಟು ಹಾಕಿ, ಅರ್ಧ ಚಮಚ ಓಂ ಕಾಳು, ಅರ್ಧ ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನೀರು ಬೇಕಾದರೆ ಮಾತ್ರ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಕಲಸಿ. ಒಂದು ಚಮಚ ಎಣ್ಣೆ ಹಾಕಿ ಮತ್ತೂ ಚೆನ್ನಾಗಿ ಕಲಸಿ. ಸ್ವಲ್ಪ ಗಟ್ಟಿ ಹಿಟ್ಟಾಗಿ ಮಾಡಿಕೊಳ್ಳಿ. ಚೆನ್ನಾಗಿ ಕಲಸಿ ಉಂಡೆ ಮಾಡಿದ ಹಿಟ್ಟನ್ನು 15 ನಿಮಿಷ ತೆಗೆದಿಡಿ. ಬಳಿಕ ಪುನಃ ಅದನ್ನು ನಾದಿಕೊಳ್ಳಿ. ಬಳಿಕ ಸಣ್ಣ ಸಣ್ಣ ಉಂಡೆ ಗಾತ್ರ ಮಾಡಿಕೊಂಡು ಚಪಾತಿ ಮಣೆಯಲ್ಲಿ ಲಟ್ಟಿಸಿ. ಬಳಿಕ ಅದನ್ನು ಮಧ್ಯಮ ಉರಿಯಲ್ಲಿ ಎಣ್ಣೆಯಲ್ಲಿ ಕಾಯಿಸಿಕೊಳ್ಳಿ. ಎಣ್ಣೆ ಸರಿಯಾಗಿ ಕಾಯಬೇಕು. ಪಾಲಕ್ ಪೂರಿ ರೆಡಿಯಾಗುತ್ತದೆ. ಇದನ್ನು ಮೊಸರು ಜೊತೆ ಸರ್ವ್ ಮಾಡಿ.