ಈ ವರ್ಷದ ಬೇಸಿಗೆಯ ತೀಕ್ಷ್ಣತೆಯು ಕಳೆದ ವರ್ಷಕ್ಕಿಂತಲೂ ಜೋರಾಗಿದೆ. ಏನಾದರೂ ಕುಡಿಯಬೇಕೆಂದು ಮನಸ್ಸು ಬಯಸುತ್ತದೆ. ಮನೆಯಲ್ಲಿಯೇ ಆರೋಗ್ಯಕರವಾದ ಲಸ್ಸಿ ಮತ್ತು ಸ್ಮೋದಿಗಳನ್ನು ಮಾಡಿ ಕುಡಿದರೆ ದೇಹಕ್ಕೂ ಹಿತ ಹಾಗೂ ಆರೋಗ್ಯಕ್ಕೂ ಒಳ್ಳೆಯದು.
Advertisement
ಬೇಕಾಗುವ ಸಾಮಗ್ರಿ: ಸಿಪ್ಪೆ ಸುಲಿದು ಹೆಚ್ಚಿದ 1 ಸೇಬು, ಹೆಚ್ಚಿದ 1 ಕ್ಯಾರೆಟ್, 2 ಎಲೆ ಪಾಲಕ್, ಸಿಹಿಗೆ ಬೇಕಾದಷ್ಟು ಸಕ್ಕರೆ, 1 ಕಪ್ ಹಾಲು, ಸ್ವಲ್ಪ ಐಸ್ ತುಂಡುಗಳು.
ಬೇಕಾಗುವ ಸಾಮಗ್ರಿ: 1 ಕಪ್ ಹಣ್ಣಾದ ಪಪ್ಪಾಯ ಹಣ್ಣಿನ ತಿರುಳು, 1 ಕಪ್ ಹಾಲು, ಸಿಹಿಗೆ ಬೇಕಾಗುವಷ್ಟು ಜೇನು.
ತಯಾರಿಸುವ ವಿಧಾನ: ಪಪ್ಪಾಯ ಹಣ್ಣಿನ ತಿರುಳನ್ನು ಮೊದಲಿಗೆ ರುಬ್ಬಿ. ನಂತರ ಹಾಲು, ಜೇನು ಸೇರಿಸಿ ಮತ್ತೂಮ್ಮೆ ರುಬ್ಬಿ. ಗ್ಲಾಸಿಗೆ ಹಾಕಿ ಕುಡಿಯಿರಿ.
Related Articles
ಬೇಕಾಗುವ ಸಾಮಗ್ರಿ: 1/2 ಕಪ್ ಪಪ್ಪಾಯಿ ಹಣ್ಣಿನ ಹೋಳುಗಳು, 1/2 ಕಪ್ ಮಾವಿನ ಹಣ್ಣಿನ ಹೋಳುಗಳು, 1 ಕಪ್ ಮೊಸರು, ಚಿಟಿಕೆ ಏಲಕ್ಕಿ ಪುಡಿ, 2 ಚಮಚ ಜೇನುತುಪ್ಪ.
Advertisement
ತಯಾರಿಸುವ ವಿಧಾನ: ಸಿಪ್ಪೆ-ಬೀಜ ತೆಗೆದ ಪಪ್ಪಾಯ ಹಣ್ಣು , ಸಿಪ್ಪೆ ತೆಗೆದ ಮಾವಿನ ತಿರುಳು ಸೇರಿಸಿ ರುಬ್ಬಿ. ನಂತರ ಮೊಸರು, ಏಲಕ್ಕಿ ಪುಡಿ, ಜೇನುತುಪ್ಪ ಹಾಕಿ ಇನ್ನೊಮ್ಮೆ ರುಬ್ಬಿ ತೆಗೆದು ಗ್ಲಾಸಿಗೆ ಹಾಕಿ ಸವಿಯಿರಿ.
ಅಗಸೆಬೀಜ- ಖರ್ಜೂರ-ಬಾದಾಮಿ ಸ್ಮೋದಿಬೇಕಾಗುವ ಸಾಮಗ್ರಿ: 2 ಚಮಚ ಅಗಸೆಬೀಜ, 3-4 ಖರ್ಜೂರ, 4-5 ಬಾದಾಮಿ, 2 ಕಪ್ ಹಾಲು. ತಯಾರಿಸುವ ವಿಧಾನ: ಅಗಸೆ ಬೀಜವನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಪುಡಿ ಮಾಡಿ. ಖರ್ಜೂರ ಬೀಜ ತೆಗೆದಿಡಿ. ನೀರಲ್ಲಿ ನೆನೆಸಿದ ಬಾದಾಮಿ ಸಿಪ್ಪೆ ತೆಗೆದು, ಖರ್ಜೂರ, ಜೇನುತುಪ್ಪ , ಬಾದಾಮಿ ಸೇರಿಸಿ ರುಬ್ಬಿ. ಹಾಲು ಹಾಕಿ ಒಂದು ಸುತ್ತು ತಿರುಗಿಸಿ. ಸ್ವಲ ಏಲಕ್ಕಿ ಪುಡಿ ಹಾಕಿ ಸರಿಯಾಗಿ ಬೆರೆಸಿ ರುಬ್ಬಿದ ಅಗಸೆಬೀಜ ಸೇರಿಸಿ ಇನ್ನೊಮ್ಮೆ ತೊಳಸಿ ಗ್ಲಾಸಿಗೆ ಹಾಕಿ ಕುಡಿಯಿರಿ. ಪಾಲಕ್-ಗೋಡಂಬಿ-ಬಾದಾಮಿ ಲಸ್ಸಿ
ಬೇಕಾಗುವ ಸಾಮಗ್ರಿ: 1 ಕಪ್ ಮೊಸರು, 1/2 ಕಪ್ ಪಾಲಕ್ ಸೊಪ್ಪು , 4-5 ಬಾದಾಮಿ, 1/4 ಕಪ್ ಗೋಡಂಬಿ, 4 ಚಮಚ ಸಕ್ಕರೆ, ಚಿಟಿಕೆ ಕರಿ ಉಪ್ಪು , 1/4 ಚಮಚ ಜೀರಿಗೆ, ಸ್ವಲ್ಪ ನೀರು. ತಯಾರಿಸುವ ವಿಧಾನ: ಸ್ವಚ್ಛವಾಗಿ ತೊಳೆದ ಪಾಲಕ್ ಸೊಪ್ಪು , ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ನೀರಲ್ಲಿ ನೆನೆಸಿದ ಗೋಡಂಬಿ, ಸಕ್ಕರೆ, ಜೀರಿಗೆ, ಕರಿ ಉಪ್ಪು ಸೇರಿಸಿ, ಮೊಸರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸ್ವಲ್ಪ ನೀರು ಸೇರಿಸಿ ಸ್ವಲ್ಪ ಹೊತ್ತು ಮಿಕ್ಸಿಯಲ್ಲಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ. ಅನಾನಸು- ಎಳನೀರು ಸ್ಮೋದಿ
ಬೇಕಾಗುವ ಸಾಮಗ್ರಿ: 1 ಕಪ್ ಗಂಜಿ ಸಹಿತ ಎಳನೀರು, 1/2 ಕಪ್ ಅನಾನಸು ತಿರುಳು, 1 ಸಣ್ಣ ಚಮಚ ನಿಂಬೆರಸ, 1/2 ಕಪ್ ನೀರು, ರುಚಿಗೆ ತಕ್ಕಷ್ಟು ಜೇನು. ತಯಾರಿಸುವ ವಿಧಾನ: ಅನಾನಸು ತಿರುಳು, ಎಳನೀರು, ಎಳನೀರಿನ ಗಂಜಿ, ನಿಂಬೆರಸ, ಜೇನು ಸೇರಿಸಿ ಮಿಕ್ಸಿ ಹಾಕಿ ತಿರುವಿ. ನಂತರ ಗ್ಲಾಸಿಗೆ ಹಾಕಿ ಕೂಡಲೇ ಸವಿಯಿರಿ.
ಮಾವಿನ ಹಣ್ಣಿನ ಲಸ್ಸಿ ಬೇಕಾಗುವ ಸಾಮಗ್ರಿ: 1 ಕಪ್ ಮಾವಿನ ಹಣ್ಣಿನ ತಿರುಳು, 1 ಕಪ್ ಮೊಸರು, 2 ಬಿಂದು ವೆನಿಲ್ಲಾ ಎಸೆನ್ಸ್ , ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಜೇನು ಯಾ ಜೋನಿ ಬೆಲ್ಲ. ತಯಾರಿಸುವ ವಿಧಾನ: ಮಾವಿನ ಹಣ್ಣಿನ ತಿರುಳು, ಮೊಸರು, ವೆನಿಲ್ಲಾ ಎಸೆನ್ಸ್ , ನೀರು, ಜೇನು ಯಾ ಜೋನಿ ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಕುಡಿಯಿರಿ.