Advertisement

ಫೆಡರರ್‌-ನಡಾಲ್‌ ನೇರ ಪ್ರಸಾರ ಪಾಕ್‌ನಲ್ಲಿರಲಿಲ್ಲ!

03:45 AM Feb 03, 2017 | Team Udayavani |

ಕರಾಚಿ: ಮೊನ್ನೆ ಭಾನುವಾರ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪುರುಷರ ಸಿಂಗಲ್ಸ್‌ ಅಂತಿಮ ಪಂದ್ಯ ನಡೆಯಿತು. 2007ರ ನಂತರ ಮೊದಲ ಬಾರಿಗೆ ಇಬ್ಬರ ನಡುವೆ ಮಹತ್ವದ ಪಂದ್ಯ ನಡೆಯಿತು. ಆದರೆ ಈ ಪಂದ್ಯದ ನೇರಪ್ರಸಾರ ಪಾಕಿಸ್ತಾನದಲ್ಲಿರಲೇ ಇಲ್ಲ!

Advertisement

ಇಂತಹದೊಂದು ದುಸ್ಥಿತಿಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ರಮೀಜ್‌ ರಾಜಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಹುತೇಕ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪಂದ್ಯದ ನೇರಪ್ರಸಾರವಾಗಿದ್ದರೂ ಪಾಕಿಸ್ತಾನದಲ್ಲಿ ಮಾತ್ರ ಅಧಿಕೃತ ವಾಹಿನಿ ಲಭ್ಯವೇ ಇರಲಿಲ್ಲ. ಇಂತಹದೊಂದು ಮಹತ್ವದ ಪಂದ್ಯ ನಡೆಯುತ್ತಿದ್ದರೂ ಯಾವುದೇ ವಾಹಿನಿ ಅದನ್ನು ಪ್ರಸಾರ ಮಾಡದಿರುವುದು ನಾಚಿಕೆಗೇಡು ಎಂದು ರಮೀಜ್‌ ರಾಜಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next