Advertisement

ಈಗ ಸಾಕ್ಷ್ಯ ಕೊಡುವ ಸರದಿ ಪಾಕ್‌ನದ್ದು!

03:50 AM Feb 28, 2017 | |

ನವದೆಹಲಿ: ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಹರಿದುಬರು­ವು­ದನ್ನು ತಡೆಹಿಡಿದಿದ್ದೇವೆ ಎಂದು ಪಾಕಿಸ್ತಾನ­ವೇನೋ ಹೇಳಿದೆ. ಆದರೆ, ಅದರಲ್ಲಿ ಎಷ್ಟು ಸತ್ಯವಿದೆ ಎನ್ನುವುದು ಗೊತ್ತಾಗಬೇಕಲ್ಲವೇ?

Advertisement

ಅದಕ್ಕಾಗಿಯೇ ಈಗ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ತಡೆದಿರುವುದಕ್ಕೆ ಸಾಕ್ಷ್ಯವನ್ನು ನೀಡಿ ಎಂದು ಅಂತಾರಾಷ್ಟ್ರೀಯ ಉಗ್ರ ನಿಧಿ ನಿಗಾ ಸಂಸ್ಥೆಯಾದ ಹಣಕಾಸಿಗೆ ಸಂಬಂಧಿಸಿದ ಕಾರ್ಯಪಡೆ (ಎಫ್ಎಟಿಎಫ್) ಯು ಪಾಕಿಸ್ತಾನಕ್ಕೆ ಸೂಚಿಸಿದೆ. ಎಲ್ಲದಕ್ಕೂ ಸಾಕ್ಷ್ಯ ಕೇಳುವ ಪಾಕಿಸ್ತಾನವು ಈಗ ತಾನು ಉಗ್ರರಿಗೆ ಬರುವ ಧನಸಹಾಯವನ್ನು ನಿಲ್ಲಿಸಿದ್ದೇನೆ ಎನ್ನುವುದಕ್ಕೂ ಪುರಾವೆ ಒದಗಿಸಬೇಕಾಗಿ ಬಂದಿದೆ.

ಜಮಾತ್‌-ಉದ್‌-ದಾವಾ, ಜೈಶ್‌-ಎ-ಮೊಹಮ್ಮದ್‌ ಹಾಗೂ ಇತರೆ ಉಗ್ರ ಸಂಘಟನೆಗಳಿಗೆ ಹರಿದು ಬರುತ್ತಿದ್ದ ಹಣ­ಕಾಸಿನ ದಾರಿಯನ್ನು ಬ್ಲಾಕ್‌ ಮಾಡಿರುವು­ದನ್ನು ತೋರಿಸಲು ಪಾಕಿಸ್ತಾನಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದನ್ನು ಅನುಸರಿಸುವಲ್ಲಿ ತಪ್ಪಿದರೆ, ಪಾಕ್‌ ಸರ್ಕಾರವೇ ಕ್ರಮ ಎದುರಿಸಬೇಕಾಗುತ್ತದೆ. ನಿಯಮ ಉಲ್ಲಂ ಸಿದರೆ ಅಂಥ ದೇಶಗಳ ಮೇಲೆ “ವಿಶ್ವಾಸಾರ್ಹ ದೇಶಗಳಲ್ಲ’ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next