Advertisement
ಭೀಕರ ಮಳೆಯ ಅವಾಂತರದಿಂದ ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆದರೆ ತನ್ನ ನಗರ ಅರ್ಧ ನೀರಿನಲ್ಲಿ ಮುಳುಗಿದ್ದರೂ ಇಮ್ರಾನ್ ಸರಕಾರ ಮಾತ್ರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ. ಈ ಕುರಿತಂತೆ ಅವರದೇ ಪಕ್ಷದ ನಾಯಕರು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.
Related Articles
ಪ್ರತಿಪಕ್ಷ ಪಕ್ಷದ ಮುಸ್ಲಿಂ ಲೀಗ್-ಕೈದ್ ಅಧ್ಯಕ್ಷ ಚೌಧರಿ ಶುಜಾತ್ ಹುಸೇನ್ ಅವರು ಪ್ರಧಾನಿ ಇಮ್ರಾನ್ ಖಾನ್ ಕರಾಚಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಹೇಳಿದ್ದಾರೆ. ಕರಾಚಿಯ ಐಷಾರಾಮಿ ಪ್ರದೇಶಗಳಲ್ಲಿ ರಕ್ಷಣಾ ವಸತಿ ಪ್ರದೇಶದಲ್ಲಿ (ಡಿಎಚ್‌ಎ) ಐದು ವಿದ್ಯುತ್ ಫೀಡರ್‌ಗಳು ಸ್ಥಗಿತಗೊಂಡಿವೆ. ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಕರಾಚಿ ಎಲೆಕ್ಟ್ರಿಕ್, ಉಪಕೇಂದ್ರಗಳಲ್ಲಿ ನೀರು ತುಂಬಿರುವುದರಿಂದ ಫೀಡರ್‌ನೊಳಗೆ ನೀರು ಹೋಗಿದೆ. ಇದೀಗ ಐದು ಫೀಡರ್‌ಗಳನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಕರಾಚಿ ನಗರವನ್ನು ಒಮ್ಮೆ ಮೇಲಿನಿಂದ ನೋಡಿದರೆ ನದಿ ಹರಿದಂತೆ ತೋರುತ್ತದೆ. ಗುಲ್ಶನ್-ಇ-ಹದೀದ್ (72 ಮಿಲಿ ಮೀಟರ್) ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನಜಿಮಾಬಾದ್ 51.6 ಮಿ.ಮೀ ಮತ್ತು ಉತ್ತರ ಕರಾಚಿಯಲ್ಲಿ 37 ಮಿ.ಮೀ ಮಳೆಯಾಗಿದೆ. ಸುರಜನಿ ಮತ್ತು ಒರಂಗಿ ಪಟ್ಟಣಗಳು ಪ್ರವಾಹಕ್ಕೆ ತುತ್ತಾಗಿರುವುದರಿಂದ ನೂರಾರು ಜನರು ಮನೆಗಳನ್ನು ತೊರೆದಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಲ್ಯಾಂಡಿ ಮತ್ತು ಫೆಡರಲ್ ಬಿ ಪ್ರದೇಶದ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ನೀರಿನಿಂದ ಆವೃತವಾಗಿವೆ.