Advertisement
ಅಂದಹಾಗೆ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ವಿರುದ್ಧವೇ ನಿಲ್ಲುವಷ್ಟು ಧೈರ್ಯ ಎಲ್ಲಿಂದ ಬಂತು ಎಂದು ಯೋಚಿಸುತ್ತಿದ್ದೀರಾ? ಆ ಧೈರ್ಯ ಬರಲು ಕಾರಣ ಭಾರತವೇ! ಹೌದು. 1999ರಲ್ಲಿ ಭಾರತ ಅಟ್ಲಾಂಟಿಕ್ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿತ್ತು. ಈ ಪ್ರಕರಣದಲ್ಲಿ ಐಸಿಜೆ ಭಾರತದ ವಿರುದ್ಧ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಧಿಕ್ಕರಿಸಿದ್ದ ಭಾರತ, ಕಾಮನ್‌ವೆಲ್ತ್ ರಾಷ್ಟ್ರಗಳ ನಡುವಿನ ವ್ಯಾಜ್ಯಗಳ ಕುರಿತು ತೀರ್ಪು ನೀಡುವ ಅಧಿಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕಿಲ್ಲ. ಇದು ಐಸಿಜೆ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು.ಅಂದು ಭಾರತ ಬಳಸಿದ “ಅಧಿಕಾರ ವ್ಯಾಪ್ತಿ’ಯ ಅಸ್ತ್ರವನ್ನೇ, ಈಗ ಜಾಧವ್ ಪ್ರಕರಣದಲ್ಲಿ ಬಳಸಲು ಪಾಕಿಸ್ಥಾನ ನಿರ್ಧರಿಸಿದೆ. ಕುಲಭೂಷಣ್ ಜಾಧವ್ ಪ್ರಕರಣ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯವು ಸೋಮವಾರ ಭಾರತದ ವಾದವನ್ನು ಆಲಿಸಲಿದೆ. ಈ ವೇಳೆ ಪಾಕಿಸ್ಥಾನ “ಅಧಿಕಾರ ವ್ಯಾಪ್ತಿಯ ಪ್ರಶ್ನೆ’ಯೆತ್ತುವ ಸಾಧ್ಯತೆಯಿದೆ. “ಜಾಧವ್‌ಗೆ ನೀಡಿರುವ ಮರಣದಂಡನೆಯನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂಬ ಸಲಹೆಗಳನ್ನು ಈಗಾಗಲೇ ನಾವು ಪ್ರಧಾನಿಗಳ ಕಚೇರಿ ಹಾಗೂ ವಿದೇಶಾಂಗ ಇಲಾಖೆ ಕಚೇರಿ ಗಮನಕ್ಕೆ ತಂದಿದ್ದೇವೆ,’ ಎಂದು ಪಾಕಿಸ್ಥಾನದ ಅಟಾರ್ನಿ ಜನರಲ್ ಅಶ¤ರ್ ಔಸಫ್ ಹೇಳಿರುವುದಾಗಿ “ಡಾನ್’ ಪತ್ರಿಕೆ ವರದಿ ಮಾಡಿದೆ.