Advertisement

ಪಾಕಿಸ್ಥಾನದ ಹಬೀಬ್‌ ಬ್ಯಾಂಕ್‌ಗೆ 22.5 ಕೋಟಿ ಡಾ. ದಂಡ

03:57 PM Sep 08, 2017 | udayavani editorial |

ನ್ಯೂಯಾರ್ಕ್‌ : ಅಕ್ರಮ ಹಣ ವರ್ಗಾವಣೆಯನ್ನು ನಿಗ್ರಹಿಸುವ ಅಮೆರಿಕದ ಹಣಕಾಸು ಕಾನೂನು ಉಲ್ಲಂಘನೆಗಾಗಿ ಪಾಕಿಸ್ಥಾನದ ಅತೀ ದೊಡ್ಡ ಹಬೀಬ್‌ ಬ್ಯಾಂಕ್‌ ವಿರುದ್ಧ ನ್ಯೂಯಾರ್ಕ್‌ ನ ಹಣಕಾಸು ಸೇವಾ ಇಲಾಖೆಯು ಕೈಗೊಂಡಿರುವ ಅನುಷ್ಠಾನ ಕ್ರಮದ ಅಂಗವಾಗಿ ಹಬೀಬ್‌ ಬ್ಯಾಂಕ್‌ಗೆ 22.50 ಕೋಟಿ ಡಾಲರ್‌ ದಂಡ ಹೇರಲಾಗಿದೆ. 

Advertisement

ಈ ಬೃಹತ್‌ ಮೊತ್ತವನ್ನು ತಾನು ಪಾವತಿಸುವುದಾಗಿ ಪಾಕಿಸ್ಥಾನದ ಹಬೀಬ್‌ ಬ್ಯಾಂಕ್‌ ಒಪ್ಪಿಕೊಂಡಿದೆ.

ಆದರೆ ಇದೇ ವೇಳೆ ಹಬೀಬ್‌ ಬ್ಯಾಂಕ್‌, ದಂಡ ಮೊತ್ತ ಇತ್ಯರ್ಥದ ವಿಶಾಲ ತಳಹದಿಯ ಭಾಗವಾಗಿ ತಾನು ಮೂರನೇ ಒಂದಂಶವನ್ನು ಪಾವತಿಸುವುದಲ್ಲದೆ ತನ್ನ ನ್ಯೂಯಾರ್ಕ್‌ ಶಾಖೆಯನ್ನು ಕೆಲವೊಂದು ಶರತ್ತುಗಳಿಗೆ ಒಳಪಟ್ಟು ಮುಚ್ಚಲು ಸಿದ್ಧವಿರುವುದಾಗಿ ಹೇಳಿದೆ ಎಂದು ನ್ಯೂಯಾರ್ಕ್‌ ಹಣಕಾಸು ಸೇವಾ ನಿಯಂತ್ರಣ ಸಂಸ್ಥೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next