Advertisement

ಪಾಕ್ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ, ಇಬ್ಬರು ಪಾಕ್ ಕಮಾಂಡೋ ಬಲಿ

11:10 AM Aug 29, 2019 | Nagendra Trasi |

ಜಮ್ಮು-ಕಾಶ್ಮೀರ: 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಯುದ್ದೋನ್ಮಾದದಲ್ಲಿದ್ದ ಪಾಕಿಸ್ತಾನದ ಗಡಿ ಭದ್ರತಾ (ಬಿಎಟಿ) ಪಡೆಯ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಪಾಕ್ ನ ಇಬ್ಬರು ಎಸ್ ಎಸ್ ಜಿ(ಸ್ಪೆಷಲ್ ಸರ್ವೀಸ್ ಗ್ರೂಪ್) ಕಮಾಂಡೋಗಳನ್ನು ಸೇನೆ ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.

Advertisement

ಎಎನ್ ಐ ವರದಿ ಪ್ರಕಾರ, ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಈಗಾಗಲೇ ನೂರು ಎಸ್ ಎಸ್ ಜಿ ಕಮಾಂಡೋಗಳನ್ನು ನಿಯೋಜಿಸಿತ್ತು. ಏತನ್ಮಧ್ಯೆ ಎಸ್ ಎಸ್ ಜಿ ಕಮಾಂಡೋಗಳ ಚಟುವಟಿಕೆಗಳನ್ನು ಭಾರತೀಯ ಸೇನೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿತ್ತು. ಅಲ್ಲದೇ ಈ ಕಮಾಂಡೋಗಳು ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕೂಡಾ ನೀಡಿತ್ತು.

ಮಂಗಳವಾರ ಕಾಶ್ಮೀರದ ಗ್ಯುರೆಝ್ ಸೆಕ್ಟರ್ ನಲ್ಲಿ ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಮ್(ಬಿಎಟಿ) ದಾಳಿ ನಡೆಸಲು ಯತ್ನಿಸಿದ್ದು, ಅದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಭಾರತೀಯ ಸೇನೆಯ ಪ್ರತಿದಾಳಿಗೆ ಪಾಕಿಸ್ತಾನದ ಇಬ್ಬರು ಕಮಾಂಡೋಗಳು ಬಲಿಯಾಗಿರುವುದಾಗಿ ಸೇನಾ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next