Advertisement
ವಾನಿಯ ಸಾವಿನ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಗಲಭೆ ನಡೆಸುವ ಸಾಧ್ಯತೆಗಳಿದ್ದ ಕಾರಣ ಶೋಪಿಯಾನ್, ತ್ರೆಹಾYಮ್, ಕುಪ್ವಾರ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಕಾಶ್ಮೀರಾದ್ಯಂತ ಹೆಚ್ಚುವರಿ ಅರೆಸೇನಾ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಶ್ಮೀರದಲ್ಲಿ ಕರ್ಫ್ಯೂ ವಿಧಿಸಿದ್ದರಿಂದ ಅಮರನಾಥ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿ
ಸಲಾಗಿತ್ತು. ಇದೇ ವೇಳೆ, ಬಂಡಿಪೋರಾ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಗಸ್ತು ಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಮೂವರು ಸೇನಾ ಸಿಬಂದಿ ಗಾಯಗೊಂಡಿದ್ದಾರೆ.