ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಆ.11ರಂದು ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿರುವಂತೆಯೇ, ಜು.25ರ ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಸಂಸತ್‌ನಲ್ಲಿ ತಮ್ಮದೇ ಪ್ರಧಾನಿ ಅಭ್ಯರ್ಥಿ ನಿಯೋಜಿಸಲು ನಿರ್ಧರಿಸಿವೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ನಾಯಕರು ಗುರುವಾರ ಈ ಘೋಷಣೆ ಮಾಡಿದ್ದಾರೆ. ಈ ಮೈತ್ರಿಕೂಟ ಅಕ್ರಮ ಚುನಾವಣೆಯ ವಿರುದ್ಧವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶ ನೀಡಲಾಗಿಲ್ಲ ಎಂದು ಪಿಎಂಎಲ್-ಎನ್ ನಾಯಕ ಮರ್ಯಾಮ್ ಔರಂಜೇಬ್ ತಿಳಿಸಿದ್ದಾರೆ.
ಖಾನ್‌ಗೆ ಬುಲಾವ್: ಮತ್ತೂಂದೆಡೆ ಖೈಬರ್ ಪಖು¤ಂಖ್ವಾ ಪ್ರಾಂತ್ಯ ಸರ್ಕಾರದ ಹೆಲಿಕಾಪ್ಟರ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಹಿನ್ನೆಲೆ ಯಲ್ಲಿ ಪಾಕ್‌ನ ಭ್ರಷ್ಟಾಚಾರ ನಿಯಂತ್ರಣ ಮಂಡಳಿ (ಎನ್‌ಎಬಿ) ಖಾನ್‌ಗೆ ಆ.7ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸಾಲದ ಸುರಿಮಳೆ: ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಇಮ್ರಾನ್ ಖಾನ್ ಬಹುಕೋಟಿ ಮೊತ್ತದ ಸಾಲ ಪಾವತಿ ಮಾಡುವ ಒತ್ತಡಕ್ಕೆ ಸಿಲುಕಲಿದ್ದಾರೆ. ಬರೋ ಬ್ಬರಿ 82,331 ಕೋಟಿ ರೂ. (12 ಮಿಲಿಯನ್ ಡಾಲರ್) ಮೊತ್ತದ ಸಾಲ ತಕ್ಷಣವೇ ಪಾವತಿ ಮಾಡಬೇಕಾಗಿದೆ. ಅದ ರಲ್ಲಿ ಐಎಂಎಫ್ಗೆ ನೀಡಬೇಕಾಗಿರುವ ಬಾಕಿಯೇ ಅಧಿಕ.
ಈ ನಡುವೆ ತಮಗೆ ಅಧಿಕೃತ ಆಹ್ವಾನ ಇದ್ದರೆ ಮಾತ್ರ ಇಮ್ರಾನ್ ಪ್ರಮಾಣ ವಚನ ಸಮಾರಂಭಕ್ಕೆ ತೆರಳುವುದಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ.