ವಾಷಿಂಗ್ಟನ್: ಭಾರತದ ಮತ್ತು ಅಫ್ಘಾನಿಸ್ಥಾನದಲ್ಲಿನ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಮತ್ತು ಉದ್ದೇಶವನ್ನು ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳು ಹೊಂದಿವೆ ಎಂದು ಅಮೆರಿಕದ ಗೃಹ ಸಚಿವಾಲಯ ಹೇಳಿದೆ.
ಪಾಕಿಸ್ಥಾನದ ಮೂಲದ ಲಷ್ಕರ್ ಎ ತೋಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳು ಅಂತಹ ದಾಳಿ ನಡೆಸುವ ಅಪಾಯವಿದೆ ಎಂದು ಅದು ಭಯೋತ್ಪಾದನೆ ಕುರಿತ ದೇಶೀಯ ವರದಿ-2018ರಲ್ಲಿ ಹೇಳಿದೆ.
ಭಾರತ ಪಾಕ್ ಮೂಲದ ಉಗ್ರರಿಂದ ದಾಳಿ ಭೀತಿಯನ್ನು ಎದುರಿಸುತ್ತಲೇ ಇದೆ. ಭಾರತ ಗಡಿಯಾಚೆಗಿಂದ ನಡೆಯುವ ಚಿತಾವಣೆಗಳ ಬಗ್ಗೆ ಹೇಳುತ್ತಲೇ ಇದೆ ಅಲ್ಲದೇ ಉಗ್ರ ಸಂಘಟನೆಗಳ ವಿರುದ್ಧವೂ ಅದು ಹಲವು ರೀತಿಯ ಒತ್ತಡ, ಅವುಗಳ ಮೂಲೋತ್ಪಾಟನೆಗೆ ಶ್ರಮಿಸುತ್ತಲೇ ಇದೆ. ಹಲವು ಕಾರ್ಯಾಚರಣೆಗಳನ್ನೂ ಅದು ಗಡಿಯಲ್ಲಿ ನಡೆಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಲ್ಲದೇ ಪಾಕ್ ಆಡಳಿತ ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ಜಾಲವನ್ನು ನಿಯಂತ್ರಿಸಲು ಮನಸ್ಸು ಮಾಡುತ್ತಿಲ್ಲ. ಅವುಗಳಿಗೆ ಪಾಕಿಸ್ಥಾನ ಎನ್ನುವುದು ಸ್ವರ್ಗವಾಗಿದೆ. 2018ರಲ್ಲಿ ಲಷ್ಕರ್ ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆಗಳನ್ನು ನಿಯಂತ್ರಿಸುವುದರಲ್ಲಿ ಪಾಕ್ ವಿಫಲವಾಗಿದೆ. ಜತೆಗೆ ಪಾಕ್‌ನಲ್ಲಿ ಧಾರ್ಮಿಕ ಅಲ್ಪಸಂಖ್ಯಾಕರು ಉಗ್ರ ಸಂಘಟನೆಗಳಿಂದ ತೀವ್ರ ದಾಳಿ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದೂ ಹೇಳಿದೆ.