ಹೈದರಾಬಾದ್: ಟೀಂ ಇಂಡಿಯಾದ ವೇಗಿ, ಆಲ್ ರೌಂಡರ್ ಇರ್ಫಾನ್ ಪಠಾಣ್ ಇತ್ತೀಚೆಗೆ ನಾಗ್ ಪುರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತುಂಬಾ ಕುತೂಹಲಕಾರಿಯಾದ ಪ್ರಸಂಗವೊಂದನ್ನು ಹಂಚಿಕೊಂಡಿದ್ದರು.
ಹುಡುಗಿ ಕೇಳಿದ ಪ್ರಶ್ನೆಗೆ ಇರ್ಫಾನ್ ದಿಟ್ಟ ಉತ್ತರ!
ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಒಮ್ಮೆ ಪಾಕಿಸ್ತಾನದ ಲಾಹೋರ್ ನಲ್ಲಿ ಪಂದ್ಯ ಆಡಿದ ಬಳಿಕ ಹುಡುಗಿಯೊಬ್ಬಳು ಇರ್ಫಾನ್ ಬಳಿ ಬಂದು, ನೀವೊಬ್ಬ ಮುಸ್ಲಿಂ ಆಗಿಯೂ ಭಾರತದ ಪರ ಯಾಕೆ ಆಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಳಂತೆ.
ಅದಕ್ಕೆ ಇರ್ಫಾನ್ ಪಠಾಣ್ ಹೇಳಿದ್ದಿಷ್ಟು: ಹೌದು ಅದೇ ಮುಖ್ಯವಾದ ವಿಷಯ ಯಾಕೆಂದರೆ ಭಾರತದ ಪರ ಆಟವಾಡುವುದೇ ಹೆಮ್ಮೆಯ ವಿಚಾರ ಎಂದಿದ್ದರು. ಹೌದು ಈ ಘಟನೆ ನನ್ನನ್ನು ಮತ್ತಷ್ಟು ಹೆಚ್ಚಿ ಕ್ರಿಯಾಶೀಲನಾಗುವಂತೆ ಮಾಡಿತ್ತು. ನನ್ನ ಕ್ರೀಡಾ ಬದುಕಿನ ಜೀವನದುದ್ದಕ್ಕೂ ನನಗೆ ಭಾರತದ ಪರ ಆಡುವುದೇ ಹೆಮ್ಮೆಯ ವಿಚಾರವಾಗಿತ್ತು ಎಂದು ಹೇಳಿರುವುದಾಗಿ ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.