Advertisement

ಪಾಕ್‌ ಕ್ರಿಕೆಟಿಗರ ಚಿತ್ರ ತೆರವು ದುರದೃಷ್ಟಕರ: ಪಿಸಿಬಿ

12:30 AM Feb 19, 2019 | |

ಕರಾಚಿ: ಭಾರತದ ವಿವಿಧ ಕ್ರಿಕೆಟ್‌ ಸ್ಟೇಡಿಯಂಗಳಲ್ಲಿದ್ದ ಇಮ್ರಾನ್‌ ಖಾನ್‌ ಫೋಟೋ ಸಹಿತ ಪಾಕಿಸ್ಥಾನ ಕ್ರಿಕೆಟಿಗೆ ಸಂಬಂಧಿಸಿದ ವಿವಿಧ ಫೋಟೋಗಳನ್ನು ಬಿಸಿಸಿಐ ತೆರವುಗೊಳಿಸಿದ ಕ್ರಮ ದುರದೃಷ್ಟಕರ ಎಂಬುದಾಗಿ ಪಿಸಿಬಿ ಹೇಳಿದೆ. 

Advertisement

ಫೆ. 28ರಿಂದ ದುಬಾೖಯಲ್ಲಿ ಆರಂಭವಾಗಲಿರುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಲಾಗುವುದು ಎಂದು ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಮ್‌ ಖಾನ್‌ ಹೇಳಿದ್ದಾರೆ.

“ಕ್ರೀಡೆ ಮತ್ತು ರಾಜಕೀಯವನ್ನು ಯಾವತ್ತೂ ಪ್ರತ್ಯೇಕವಾಗಿ ಇಡಬೇಕು ಎಂಬುದು ನಮ್ಮ ಉದ್ದೇಶ. ಕ್ರೀಡೆ, ಅದರಲ್ಲೂ ಕ್ರಿಕೆಟ್‌ ಎನ್ನುವುದು ಜನರು ಮತ್ತು ದೇಶಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಐತಿಹಾಸಿಕ ಕ್ರಿಕೆಟ್‌ ಕ್ಲಬ್‌ಗಳು ಪಾಕ್‌ ಕ್ರಿಕೆಟ್‌ ತಂಡದ ಮಾಜಿ ನಾಯಕನೂ ಹಾಲಿ ಪ್ರಧಾನಿಯೂ ಆಗಿರುವ ಇಮ್ರಾನ್‌ ಖಾನ್‌, ಇಲ್ಲಿನ ಇತರ ಲೆಜೆಂಡ್ರಿ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸುವ ಕ್ರಮಕ್ಕೆ ಮುಂದಾದದ್ದು ನಿಜಕ್ಕೂ ದುರದೃಷ್ಟಕರ’ ಎಂದು ವಾಸಿಮ್‌ ಖಾನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next