Advertisement

ಪಾಕ್‌ ಕ್ರಿಕೆಟಿಗ ಆಸಿಫ್ ಅಲಿ ಪುತ್ರಿ ಕ್ಯಾನ್ಸರ್‌ನಿಂದ ಸಾವು

03:15 AM May 21, 2019 | Team Udayavani |

ಕರಾಚಿ: ಪಾಕಿಸ್ಥಾನ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಆಸಿಫ್ ಅಲಿ ಭಾರೀ ಆಘಾತಕ್ಕೆ ತುತ್ತಾಗಿದ್ದಾರೆ. ಅವರ 19 ತಿಂಗಳ ಮಗಳು ನೂರ್‌ ಫಾತಿಮಾ ಕ್ಯಾನ್ಸರ್‌ನಿಂದ ರವಿವಾರ ಮೃತಪಟ್ಟಿದ್ದಾಳೆ.

Advertisement

ಆಕೆಗೆ ಕ್ಯಾನ್ಸರ್‌ ಇದೆ ಎಂದು ತಿಳಿದಕೂಡಲೇ ಅಮೆರಿಕದಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ ಈಗಾಗಲೇ ಕ್ಯಾನ್ಸರ್‌ 4ನೇ ಹಂತಕ್ಕೆ ಮುಟ್ಟಿದ್ದರಿಂದ ಚಿಕಿತ್ಸೆ ಫ‌ಲಕಾರಿಯಾಗಲಿಲ್ಲ. ಆತಿಥೇಯ ಇಂಗ್ಲೆಂಡ್‌ ವಿರುದ್ಧ ನಡೆದ 5 ಪಂದ್ಯಗಳ ಏಕದಿನ ಸರಣಿಯ ಕೊನೆಯ 2 ಪಂದ್ಯ ಗಳಲ್ಲಿ ಆಸಿಫ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಗಳ ಸಾವಿನ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಆಸಿಫ್ಅಲಿ ಅವರನ್ನು ಪಾಕ್‌ ವಿಶ್ವಕಪ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next