Advertisement

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

12:01 PM Jan 29, 2022 | Team Udayavani |

ಇಸ್ಲಾಮಾಬಾದ್‌: ಪಬ್‌ಜಿ ಆಡುವುದನ್ನು ಬಿಟ್ಟು ಓದು ಎಂದು ಬೈದಿದ್ದಕ್ಕೆ, 14 ವರ್ಷದ ಬಾಲಕ ತಾಯಿ ಹಾಗೂ ಮೂವರು ಒಡಹುಟ್ಟಿವದರನ್ನೇ ಕೊಂದಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ; ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

ನಹೀದ್‌ ಮುಬಾರಕ್‌(45),ಆಕೆಯ 22 ತಿಂಗಳ ಮಗು ತೈಮುರ್‌ ಮತ್ತು 17, 11 ವರ್ಷದ ಇಬ್ಬರು ಹೆಣ್ಣು ಮಕ್ಕಳು ಮೃತರಾಗಿದ್ದಾರೆ. ನಹೀದ್‌ರ 14 ವರ್ಷದ ಮಗ ಪಬ್‌ಜಿ ಆಟವನ್ನು ಚಟವಾಗಿ ಮಾಡಿಕೊಂಡಿದ್ದನಂತೆ. ಈ ವಿಚಾರವಾಗಿ ಇತ್ತೀಚೆಗೆ ನಹೀದ್‌, ಮಗನಿಗೆ ಬೈದಿದ್ದಾಳೆ.

ಅದೇ ಸಿಟ್ಟಿನಿಂದ ಆತ, ರಾತ್ರಿ ವೇಳೆ ಅಮ್ಮ, ಅಣ್ಣ, ಅಕ್ಕ ಮತ್ತು ತಂಗಿಗೆ ಮನೆಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಮಾರನೇ ದಿನ ಬೆಳಗ್ಗೆ ಈ ವಿಚಾರ ಪೊಲೀಸರಿಗೆ ತಲುಪಿದ್ದು, ಬಾಲಕ ತಪ್ಪೊಪ್ಪಿ ಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನಹೀದ್ ಗಂಡನಿಂದ ವಿಚ್ಛೇದಿತಳಾಗಿದ್ದು, ಇದರಿಂದಾಗಿ ಆಕೆ ಮಗನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸದೆ ಇದ್ದ ಪರಿಣಾಮ ಬಾಲಕ ಹೆಚ್ಚಿನ ಸಮಯವನ್ನು ಪಬ್ ಜಿ ಆಡುವುದರಲ್ಲಿಯೇ ಕಾಲ ಕಳೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next