Advertisement

ವನಿತಾ ಟಿ20 ಸರಣಿ: ಬಾಂಗ್ಲಾವನ್ನು ಮಣಿಸಿದ ಪಾಕ್‌

12:02 AM Oct 27, 2019 | Sriram |

ಲಾಹೋರ್‌: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಶನಿವಾರ ಇಲ್ಲಿನ “ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆದ ಮೊದಲ ವನಿತಾ ಟಿ20 ಪಂದ್ಯವನ್ನು ಪಾಕಿಸ್ಥಾನ 14 ರನ್ನುಗಳಿಂದ ಜಯಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 7 ವಿಕೆಟಿಗೆ 126 ರನ್‌ ಗಳಿಸಿದರೆ, ಬಾಂಗ್ಲಾದೇಶ 7 ವಿಕೆಟಿಗೆ 112 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪಾಕಿಸ್ಥಾನ ಸಂಘಟಿತ ದಾಳಿಯ ಮೂಲಕ ಯಶಸ್ಸು ಕಂಡಿತು. ದಾಳಿಗಿಳಿದ ಎಲ್ಲ 6 ಮಂದಿ ಬೌಲರ್‌ಗಳೂ ವಿಕೆಟ್‌ ಕಿತ್ತರು. ಅನಾಮ್‌ ಅಮಿನ್‌ 13ಕ್ಕೆ 2 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಬಾಂಗ್ಲಾದ ಮಧ್ಯಮ ಸರದಿಯ ಆಟಗಾರ್ತಿ ರುಮಾನಾ ಅಹ್ಮದ್‌ 50 ರನ್‌ ಬಾರಿಸಿ (30 ಎಸೆತ, 6 ಬೌಂಡರಿ, 2 ಸಿಕ್ಸರ್‌) ದಿಟ್ಟ ಹೋರಾಟ ನಡೆಸಿದರೂ ಉಳಿದವರಿಂದ ಬೆಂಬಲ ಲಭಿಸಲಿಲ್ಲ.

ಪಾಕಿಸ್ಥಾನದ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದವರು ನಾಯಕಿ ಬಿಸ್ಮಾ ಮರೂಫ್ (34) ಮತ್ತು ಒಮೈಮಾ ಸೊಹೈಲ್‌ (33). ಇವರಿಂದ 3ನೇ ವಿಕೆಟಿಗೆ 60 ರನ್‌ ಒಟ್ಟುಗೂಡಿತು.

Advertisement

Udayavani is now on Telegram. Click here to join our channel and stay updated with the latest news.

Next