ಕಾರ್ಡಿಫ್: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದಿದೆ.ರವಿವಾರ ರಾತ್ರಿ ಸೋಫಿಯಾ ಗಾರ್ಡನ್‌ನಲ್ಲಿ ನಡೆದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 6 ವಿಕೆಟಿಗೆ 173 ರನ್ನುಗಳ ದೊಡ್ಡ ಮೊತ್ತ ದಾಖಲಿಸಿದರೂ ಇಂಗ್ಲೆಂಡ್ ಇದನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. 19.2 ಓವರ್‌ಗಳಲ್ಲಿ 3 ವಿಕೆಟಿಗೆ 175 ರನ್ ಹೊಡೆದು ಜಯಭೇರಿ ಮೊಳಗಿಸಿತು. ನಾಯಕ ಮಾರ್ಗನ್ 29 ಎಸೆತಗಳಿಂದ ಅಜೇಯ 57 ರನ್ (5 ಬೌಂಡರಿ, 3 ಸಿಕ್ಸರ್) ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಮಾರ್ಗನ್-ಜೋ ಡೆನ್ಲಿ ಜೋಡಿ ಮುರಿಯದ 4ನೇ ವಿಕೆಟಿಗೆ 3.5 ಓವರ್‌ಗಳಿಂದ 44 ರನ್ ಪೇರಿಸಿ ಪಾಕ್ ಲೆಕ್ಕಾಚಾರ ತಲೆಕೆಳಗಾಗಿಸಿದರು.
ಜೋ ರೂಟ್ (42 ಎಸೆತ, 47 ರನ್), ಜೇಮ್ಸ್ ವಿನ್ಸ್ (27 ಎಸೆತ, 36 ರನ್) ಇಂಗ್ಲೆಂಡ್ ಸರದಿಯ ಇತರ ಪ್ರಮುಖ ಸ್ಕೋರರ್.
ಬಾಬರ್, ಸೊಹೈಲ್ ಫಿಫ್ಟಿ
ಪಾಕಿಸ್ಥಾನ ಸರದಿಯಲ್ಲಿ ಬಾಬರ್ ಆಜಂ ಮತ್ತು ಹ್ಯಾರಿಸ್ ಸೊಹೈಲ್ ಅವರಿಂದ ಅರ್ಧ ಶತಕ ದಾಖಲಾಯಿತು. ಆಜಂ 42 ಎಸೆತ ಎದುರಿಸಿ 65 ರನ್ (5 ಬೌಂಡರಿ, 3 ಸಿಕ್ಸರ್), ಸೊಹೈಲ್ 36 ಎಸೆತಗಳಿಂದ 50 ರನ್ (5 ಬೌಂಡರಿ, 1 ಸಿಕ್ಸರ್) ಬಾರಿಸಿದರು.
ಇತ್ತಂಡಗಳಿನ್ನು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡು, ವಿಶ್ವಕಪ್‌ಗೆ ಭರ್ಜರಿ ತಾಲೀಮು ನಡೆಸಲಿವೆ. ಮೊದಲ ಪಂದ್ಯ ಮೇ 8ರಂದು ಓವಲ್‌ನಲ್ಲಿ ಸಾಗಲಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-6 ವಿಕೆಟಿಗೆ 173 (ಆಜಂ 65, ಸೊಹೈಲ್ 50, ಆರ್ಚರ್ 29ಕ್ಕೆ 2). ಇಂಗ್ಲೆಂಡ್-19.2 ಓವರ್‌ಗಳಲ್ಲಿ 3 ವಿಕೆಟಿಗೆ 175 (ಮಾರ್ಗನ್ ಔಟಾಗದೆ 57, ರೂಟ್ 47, ವಿನ್ಸ್ 36, ಇಮಾದ್ 24ಕ್ಕೆ 1).
ಪಂದ್ಯಶ್ರೇಷ್ಠ: ಇಯಾನ್ ಮಾರ್ಗನ್.