Advertisement

ಅಫ್ಘಾನ್‌ ವಿರುದ್ಧ ಪಾಕ್‌ ಹಾದಿ ಸುಗಮ?

09:48 AM Jun 29, 2019 | Team Udayavani |

ಲೀಡ್ಸ್‌ ಭಾರತ ವಿರುದ್ಧ ಸೋತ ಬಳಿಕ ಗೆಲುವಿನ ಹಾದಿಗೆ ಮರಳಿರುವ ಪಾಕಿಸ್ಥಾನದ ಸೆಮಿಫೈನಲ್‌ ಕನಸು ಮತ್ತೆ ಚಿಗುರೊಡೆದಿದೆ. ಪಾಕ್‌ ವಿಶ್ವಕಪ್‌
ನಾಕೌಟ್‌ ಪ್ರವೇಶಿಸಬೇಕಾದರೆ ನಾನಾ ಲೆಕ್ಕಾಚಾರಗಳಿವೆಯಾದರೂ ಮೊದಲು ಏಶ್ಯದ 2 ತಂಡಗಳಾದ ಅಫ್ಘಾನಿಸ್ಥಾನ ಮತ್ತು ಬಾಂಗ್ಲಾ ದೇಶವನ್ನು ಮಣಿಸಬೇಕಾದುದು ಅನಿವಾರ್ಯ.

Advertisement

ಈ ಪಂದ್ಯಗಳಲ್ಲಿಸರ್ಫಾರಾಜ್ ಅಹ್ಮದ್‌ ಬಳಗ ಅಫ್ಘಾನ್‌ ಪಡೆಯನ್ನು ಮೊದಲು ಎದುರಿಸಲಿದೆ. ಶನಿ ವಾರ ಲೀಡ್ಸ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಪಾಕಿಸ್ಥಾನದ ಮೊದಲ ಹರ್ಡಲ್ಸ್‌ ಸುಲಭ ಎಂಬುದು ಮೇಲ್ನೋಟದ
ಲೆಕ್ಕಾಚಾರ.

ಅಫ್ಘಾನ್‌ ಈ ವಿಶ್ವಕಪ್‌ನಲ್ಲಿ ಏನಾದರೂ ಏರುಪೇರು ಮಾಡೀತು ಎಂಬ ನಿರೀಕ್ಷೆ ಅನೇಕರದ್ದಾಗಿತ್ತು. ಆದರೆ ಅದು ಏಳಕ್ಕೆ ಏಳೂ ಪಂದ್ಯಗಳನ್ನು ಸೋತು ಹೊರಬಿದ್ದಾಗಿದೆ. ಭಾರತಕ್ಕೆ ಬೆವರಿಳಿಸಿದ್ದನ್ನು ಬಿಟ್ಟರೆ ಈ ಕೂಟದಲ್ಲಿ ಅಫ್ಘಾನ್‌ ಸಾಧನೆ ದೊಡ್ಡ ಶೂನ್ಯ. ಇಂಥ ತಂಡ ಪಾಕಿಸ್ಥಾನದ ಹಾದಿಗೆ ಮುಳ್ಳಾದೀತೇ? ಅಂಥ ಸಾಧ್ಯತೆ ಕಡಿಮೆ.

ಅಫ್ಘಾನ್‌ಗೆ ಈ ಪಂದ್ಯದಿಂದ ಆಗಬೇಕಾದ್ದೇನೂ ಇಲ್ಲ. ಪ್ರತಿಷ್ಠೆಯ ಪ್ರಶ್ನೆಯೂ ಇಲ್ಲಿಲ್ಲ. ಗೆಲ್ಲುವ ವಿದ್ಯೆಯೂ ತಿಳಿದಿಲ್ಲ. ಆದರೆ ಪಾಕಿಸ್ಥಾನಕ್ಕೆ ಗೆಲುವು ಅನಿವಾರ್ಯ. ನಾಕೌಟ್‌ ಲೆಕ್ಕಾಚಾರ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಒಂದು ಹೆಜ್ಜೆ ಎಡವಿದರೂ ಪಾಕ್‌ ಮನೆಗೆ ಮರಳಲಿದೆ. ಹೀಗಾಗಿ ಸಫ‌ರಾಜ್‌ ಬಳಗ ಅಫ್ಘಾನ್‌ ಮೇಲೆ  ಸವಾರಿ ಮಾಡುವುದರಲ್ಲಿ ಅನುಮಾನವಿಲ್ಲ

ಸಂಭಾವ್ಯ ತಂಡಗಳು
ಪಾಕಿಸ್ಥಾನ: ಇಮಾಮ್‌ ಉಲ್‌ ಹಕ್‌, ಫ‌ಕಾರ್‌ ಜಮಾನ್‌, ಬಾಬರ್‌ ಆಜಂ, ಮೊಹಮ್ಮದ್‌ ಹಫೀಜ್ , ಹ್ಯಾರಿಸ್‌ ಸೊಹೈಲ್‌, ಸಫ‌ರಾಜ್‌ ಆಹ್ಮದ್‌ (ನಾಯಕ), ಇಮಾದ್‌ ವಾಸಿಮ್‌, ಶಾದಾಬ್‌ ಖಾನ್‌, ವಹಾಬ್‌ ರಿಯಾಜ್‌, ಮೊಹಮ್ಮದ್‌ ಆಮಿರ್‌, ಶಾಹೀನ್‌ ಅಫ್ರಿದಿ

Advertisement

ಅಫ್ಘಾನಿಸ್ಥಾನ: ಗುಲ್ಬದಿನ್‌ ನೈಬ್‌ (ನಾಯಕ), ರಹಮತ್‌ ಶಾ, ಹಶ್ಮತುಲ್ಲ ಶಾಹಿದಿ, ಅಸರ್‌ ಅಫ್ಘಾನ್‌, ಮೊಹಮ್ಮದ್‌ ನಬಿ, ಸಮಿಯುಲ್ಲ ಶಿನ್ವರಿ, ನಜೀಬುಲ್ಲ ಜದ್ರಾನ್‌, ಇಕ್ರಮ್‌ ಅಲಿ ಖೀಲ್‌, ರಶೀದ್‌ ಖಾನ್‌, ದೌಲತ್‌ ಜದ್ರಾನ್‌ /ಸಯ್ಯದ್‌ ಶಿರ್ಜಾದ್‌, ಮುಜೀಬ್‌ ಉರ್‌ ರೆಹಮಾನ್‌

Advertisement

Udayavani is now on Telegram. Click here to join our channel and stay updated with the latest news.

Next