Advertisement

ಜಮ್ಮು : 24 ತಾಸುಗಳಲ್ಲಿ 3ನೇ ಬಾರಿ ಪಾಕ್‌ ಅಪ್ರಚೋದಿತ ದಾಳಿ

11:45 AM Oct 13, 2017 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಕೃಷ್ಣ  ಘಾಟಿ ವಲಯದಲ್ಲಿ ಪಾಕ್‌ ಪಡೆಗಳು ಭಾರತೀಯ ಸೇನಾ ಹೊರ ಠಾಣೆಗಳನ್ನು ಗುರಿ ಇರಿಸಿ ಇಂದು ಶುಕ್ರವಾರ ಅಪ್ರಚೋದಿತ ಗುಂಡಿನ ಹಾಗೂ ಶೆಲ್‌ ದಾಳಿಯನ್ನು ನಡೆಸಿದವು. 

Advertisement

ಕಳೆದ 24 ತಾಸುಗಳಲ್ಲಿ ಪಾಕ್‌ ಪಡೆಗಳ ಭಾರತೀಯ ಸೇನಾ ಠಾಣೆಗಳನ್ನು ಗುರಿ ಇರಿಸಿ ನಡೆಸಿರುವ ಮೂರನೇ ಅಪ್ರಚೋದಿ ಗುಂಡಿನ ದಾಳಿ ಇದಾಗಿದೆ.

“ಪಾಕ್‌ ಪಡೆಗಳು ಇಂದು ಶುಕ್ರವಾರ ಬೆಳಗ್ಗೆ 7.45ರ ಹೊತ್ತಿಗೆ ಗಡಿಯಲ್ಲಿ ಕೃಷ್ಣ ಘಾಟಿ ವಲಯದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದವು; ಒಡನೆಯೇ ಭಾರತೀಯ ಪಡೆಗಳು ಪಾಕಿಗೆ ಅತ್ಯಂತ ಬಲವಾದ ಹಾಗೂ ಪರಿಣಾಮಕಾರಿಯಾದ ಗುಂಡಿನ ಉತ್ತರ ನೀಡಿದವು; ಗುಂಡು ಹಾರಾಟ ಈಗಲೂ ಮುಂದುವರಿದಿದೆ’ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next