Advertisement

ಉಕ್ರೇನ್‌ಗೆ ಸದ್ದಿಲ್ಲದೆ ರಾಕೆಟ್‌ ಪೂರೈಸುತ್ತಿದೆ ಪಾಕಿಸ್ಥಾನ!

01:07 AM Feb 12, 2023 | Team Udayavani |

ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ಥಾನವು ಈಗ ಯುದ್ಧ­ಪೀಡಿತ ಉಕ್ರೇನ್‌ಗೆ ಸೇನಾ ಸಲಕರಣೆ­ಗಳನ್ನು ಸರಬರಾಜು ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ!

Advertisement

ಒಂದು ಕಡೆ ರಿಯಾಯಿತಿ ಬೆಲೆಯಲ್ಲಿ ತೈಲವನ್ನು ನೀಡುವಂತೆ ರಷ್ಯಾವನ್ನು ಕೇಳಿಕೊಳ್ಳುತ್ತಿರುವ ಪಾಕಿಸ್ಥಾನ, ಮತ್ತೂಂದು ಕಡೆ ಗುಟ್ಟಾಗಿ ಉಕ್ರೇನ್‌ಗೆ ಸೇನಾ ಸಾಮಗ್ರಿ ಪೂರೈಸುತ್ತಿದೆ ಎನ್ನಲಾ­ಗಿದೆ. ಏಕಕಾಲಕ್ಕೆ ಜರ್ಮನಿಯ ಬಂದರು ಮತ್ತು ಪೋಲೆಂಡ್‌ ಮಾರ್ಗದ ಮೂಲಕ ಪಾಕಿಸ್ಥಾನವು ಮಲ್ಟಿಬ್ಯಾರೆಲ್‌ ರಾಕೆಟ್‌ ಲಾಂಚರ್‌ಗಳಲ್ಲಿ ಬಳಕೆಯಾಗು­ವಂಥ ರಾಕೆಟ್‌ಗಳನ್ನು ಉಕ್ರೇನ್‌ಗೆ ಕಳುಹಿಸಿಕೊಡುತ್ತಿದೆ.

ಪ್ರಸಕ್ತ ತಿಂಗಳ ಆರಂಭದಲ್ಲೇ ಕರಾಚಿ ಬಂದರಿನಿಂದ 10 ಸಾವಿರಕ್ಕೂ ಅಧಿಕ ರಾಕೆಟ್‌ಗಳನ್ನು ಶಿಪ್ಪಿಂಗ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ನೊಂದಿಗೆ ಗಡಿ ಹಂಚಿ­ಕೊಂಡಿ­ರುವ ದೇಶಗಳ ಮೂಲಕ ಈ ಎಲ್ಲ ಸಾಮಗ್ರಿಗಳನ್ನು ಕಳುಹಿಸಲಾಗು­ತ್ತಿದೆ. ಕರಾಚಿ ಮೂಲದ ಶಿಪ್ಪಿಂಗ್‌ ಕಂಪೆನಿ ಪ್ರಾಜೆಕ್ಟ್ ಶಿಪ್ಪಿಂಗ್‌ ಕಳೆದ ತಿಂಗಳು ಪಾಕಿಸ್ಥಾನ್‌ ಆರ್ಡನೆನ್ಸ್‌ ಫ್ಯಾಕ್ಟರಿಯಿಂದ 146 ಕಂಟೈನರ್‌ಗಳನ್ನು ಉಕ್ರೇನ್‌ಗೆ ರವಾನಿಸಿದೆ.

ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಕೂಡ ಪಾಕಿಸ್ಥಾನದ ಎಂಐ-17 ಹೆಲಿಕಾಪ್ಟರ್‌ಗಳನ್ನು ಮೇಲ್ದರ್ಜೆಗೇರಿಸಲು ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲದೆ, ವಿಮಾನದ ಎಂಜಿನ್‌ಗಳು ಮತ್ತು ಇಂಡಸ್ಟ್ರಿಯಲ್‌ ಮೆರೈನ್‌ ಗ್ಯಾಸ್‌ ಟರ್ಬೈನ್‌ಗಳನ್ನು ಉತ್ಪಾ­ದಿ­ಸುವಂಥ ಉಕ್ರೇನ್‌ನ ಸಂಸ್ಥೆಯೊಂದು ಪಾಕಿಸ್ಥಾನದ ಹೆಲಿಕಾಪ್ಟರ್‌ಗಳನ್ನು ಮೇಲ್ದ­ರ್ಜೆ­ಗೇರಿಸಲು ನೆರವಾಗುವುದಾಗಿ ವಾಗ್ಧಾನ ಮಾಡಿದೆ ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next