Advertisement

Pakistan; ಅಪರಾಧಿಗೆ 80 ಛಡಿ ಏಟಿನ ಶಿಕ್ಷೆ ವಿಧಿಸಿದ  ಕೋರ್ಟ್‌

12:32 PM Apr 09, 2024 | Team Udayavani |

ಕರಾಚಿ: ಅಪರೂಪದ ಪ್ರಕರಣದಲ್ಲಿ, ತನ್ನ ಮಗುವಿನ ಪಿತೃತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಮತ್ತು ಮಾಜಿ ಪತ್ನಿ ವಿರುದ್ಧ ಸುಳ್ಳು ಆರೋಪ ಮಾಡಿದ ವ್ಯಕ್ತಿಯೊಬ್ಬನಿಗೆ ಪಾಕಿಸ್ಥಾನ ನ್ಯಾಯಾಲಯ 80 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಪಾಕಿಸ್ಥಾನದ ಸಿಂಧ್‌ ಪ್ರಾಂತದ ನಿವಾಸಿ ಫ‌ರೀದ್‌ ಖಾದಿರ್‌ ಶಿಕ್ಷೆಗೆ ಗುರಿಯಾದವನು.

Advertisement

ತಮ್ಮ ಕಾನೂನುಬದ್ಧ ಪುತ್ರಿಯನ್ನು ಖಾದಿರ್‌ ತಮ್ಮದಲ್ಲ ಎಂದು ವಾದಿಸಿದ್ದಾರೆ. ಅಲ್ಲದೇ ತನ್ನ ಮಾಜಿ ಪತ್ನಿ ವಿರುದ್ಧ ವ್ಯಭಿಚಾರದ ಸುಳ್ಳು ಆರೋಪ ಮಾಡಿದ್ದಾರೆ. ವಿಚಾರಣೆಯಿಂದ ಖಾದಿರ್‌ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿದೆ. ಖಾದಿರ್‌ ಅಪರಾಧಿ ಎಂಬುದು ಸಾಬೀತಾಗಿದ್ದು, ಪಾಕಿಸ್ಥಾನದ ಕಾನೂನಿನ ಪ್ರಕಾರ 80 ಛಡಿ ಏಟಿನ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next